ಮಡಿಕೇರಿ, ನ. 17: 25ನೇ ರಾಷ್ಟ್ರೀಯ ಸಿಬಿಎಸ್ಇ ಹಾಕಿ ಪಂದ್ಯಾಟದಲ್ಲಿ 17 ವರ್ಷದೊಳಗಿನ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡ ಫೈನಲ್ ಪ್ರವೇಶಿಸಿವೆ.
ಬಾಲಕರ ತಂಡ ದೆಹಲಿಯ ಜೆನ್ರಾಜ್ ಶಾಲೆ ತಂಡವನ್ನು 2-0 ಗೋಲುಗಳಿಂದ ಬಾಲಕಿಯರ ತಂಡ ಗಜಿóಯಾಬಾದ್ ವಿದ್ಯಾಭಾರತಿ ಶಾಲಾ ತಂಡವನ್ನು 2-0 ಗೋಲಿನಿಂದ ಮಣಿಸಿ ಫೈನಲ್ಗೆ ಅರ್ಹತೆ ಪಡೆಯಿತು. ಅಂತಿಮ ಪಂದ್ಯಾಟ ತಾ. 18 ರಂದು (ಇಂದು) ನಡೆಯಲಿದೆ.