ಮಡಿಕೇರಿ, ನ. 17: ಇಲ್ಲಿನ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 13 ರಿಂದ ಇದುವರೆಗೆ ವಿವಿಧ ಕಣ್ಣಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೇತ್ರ ತಜ್ಞರುಗಳಿಂದ ರೋಗಿಗಳ ತಪಾಸಣೆಯೊಂದಿಗೆ 144ಕ್ಕೂ ಅಧಿಕ ಮಂದಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಒಂದು ಸಾವಿರಕ್ಕೂ ಅಧಿಕ ಮಂದಿ ಕಣ್ಣಿನ ತಪಾಸಣೆಯೊಂದಿಗೆ ಶಸ್ತ್ರ ಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಂಡಿದ್ದರಾದರೂ, ರಕ್ತದೊತ್ತಡ, ಮಧುಮೇಹ ಇನ್ನಿತರ ಕಾಯಿಲೆಗಳ ಸಂಬಂಧ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲು ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ಆಡಳಿತ ಮುಖ್ಯಸ್ಥರು ತಿಳಿಸಿದ್ದಾರೆ.
ಕೇವಲ ಕಣ್ಣಿನ ಸಮಸ್ಯೆ ಮಾತ್ರ ಇದ್ದವರಿಗೆ ಈ ಬಾರಿಯ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಇತರರಿಗೆ ಮುಂದಿನ ದಿನಗಳಲ್ಲಿ ಅಂತಹವರ ಆರೋಗ್ಯ ನೋಡಿಕೊಂಡು ಚಿಕಿತ್ಸೆಗೆ ಒಳಪಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.