ನಾಪೆÉÇೀಕ್ಲು, ನ. 17: ಮಾಜಿ ಸೈನಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಗ್ಗಟ್ಟಾಗಿ ಹೋರಾಡ ಬೇಕಾಗಿದೆ ಎಂದು ನಾಪೆÇೀಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡೆಯಂಡ ಶಂಭು ಹೇಳಿದರು.
ನಾಪೆÇೀಕ್ಲು ಮಹಿಳಾ ಸಮಾಜ ದಲ್ಲಿ ಆಯೋಜಿಸಲಾಗಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಂಘಕ್ಕೆ ನೂತನ ಕಟ್ಟಡವನ್ನು ನಿರ್ಮಿಸಲು ಸ್ಥಳಕ್ಕಾಗಿ ಕಂದಾಯ ಇಲಾಖೆಯ ಕಚೇರಿಯ ಬಳಿಯಲ್ಲಿ ಜಾಗವನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳು ದೇಶದ ರಕ್ಷಣೆಗಾಗಿ ಹೋರಾಡಿದ ಮಾಜಿ ಸೈನಿಕರಿಗೆ ಈ ಜಾಗವನ್ನು ಮಂಜೂರು ಮಾಡಿಕೊಡ ಬೇಕೆಂದು ಅವರು ಮನವಿ ಮಾಡಿದರು.
ಸಭೆ ಸಮಾರಂಭಗಳಲ್ಲಿ ಸೈನಿಕರಿಗೆ ನೀಡುವ ಮದ್ಯವನ್ನು ಬಳಸಬಾರದು ಎಂದು ಅಬಕಾರಿ ಇಲಾಖೆಯವರು ಆದೇಶ ಹೊರಡಿಸಿರುವದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದರು. ಈ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮನವಿಯನ್ನು ಸಲ್ಲಿಸಲಾಗುವದು ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ, ಕಾರ್ಯದರ್ಶಿ ಕೇಟೋಳಿರ ಅಪ್ಪಚ್ಚ, ಖಜಾಂಚಿ ಅಬ್ದುಲ್ ಕರೀಂ, ಪಾಡಿಯಮ್ಮಂಡ ಅಪ್ಪಣಮ್ಮಯ್ಯ, ಪುಲ್ಲೇರ ಪಳಂಗಪ್ಪ, ಮತ್ತಿತರರು ಇದ್ದರು.