ಮಡಿಕೇರಿ: ಇಲ್ಲಿನ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರುಗಿದವು. ಬಾಲಭವನ ಸಮಿತಿ ಪ್ರಮುಖರಾದ ಮೋಹನ್ ಮೊಣ್ಣಪ್ಪ, ರವೀಂದ್ರ ರೈ, ಟಿ. ಜಾನ್ ಪೌಲ್ ಉದ್ದಿಮೆಯ ವ್ಯವಸ್ಥಾಪಕ ನಿರ್ವಾಹಕ ದೇವಯ್ಯ ಮೊದಲಾದವರು, ದಿನದ ಮಹತ್ವ ಕುರಿತು ಮಾತನಾಡಿದರು.
ಈ ಸಂದರ್ಭ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ, ಭಕ್ತಿ ಗಾಯನ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಬಾಲಭವನ ಮೇಲ್ವಿಚಾರಕಿಯರು, ಸಿಬ್ಬಂದಿ, ಜಾನ್ ಪೌಲ್ ಉದ್ದಿಮೆ ಬಳಗ ಪಾಲ್ಗೊಂಡು; ಮಕ್ಕಳಿಗೆ ಸಿಹಿ, ಲೇಖನ ಸಾಮಗ್ರಿ ವಿತರಿಸಿದರು.ಬೆಸೂರು: ಬೆಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.
*ಗೋಣಿಕೊಪ್ಪಲು-ಚೀನಿವಾಡ: ಮಕ್ಕಳ ದಿನಾಚರಣೆಯ ಅಂಗವಾಗಿ ಚೀನಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಛದ್ಮವೇಷ, ಭಾಷಣ, ನಾಟಕ, ಅಭಿನಯ ಗೀತೆ, ಭಾವಗೀತೆ, ನೃತ್ಯಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಶಿಕ್ಷಕರು ಮಕ್ಕಳ ದಿನಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು. 7ನೇ ತರಗತಿ ವಿದ್ಯಾರ್ಥಿನಿ ಶಮ್ಲ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ನಡೆಯಿತು. ಮುಖ್ಯ ಶಿಕ್ಷಕಿ ವಾಮನ, ಸಹಶಿಕ್ಷಕರಾದ ಕೆ.ಎನ್. ನಾಗರತ್ನ, ಕೆ.ಎಂ. ಪುಷ್ಪ, ರಾಜೇಶ್ವರಿ, ಶಶಿಕಲಾ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಮಿನಾ, ಉಪಾಧ್ಯಕ್ಷ ಮಜೀದ್, ಸದಸ್ಯರುಗಳಾದ ರುಬೀನ, ರಜಿಯಾ, ಕೈರುನ್ನೀಸ, ಸವಿತಾ ಹಾಜರಿದ್ದರು.ಮಡಿಕೇರಿ: ಮಂಗಳದೇವಿ ನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಮಕ್ಕಳ ಪೋಷಕರು ಅಂಗನವಾಡಿಯ ಪುಟಾಣಿ ಮಕ್ಕಳು, ವೈದ್ಯಾಧಿಕಾರಿ ಡಾ. ರಾಜ್‍ಕುಮಾರ್, ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆ, ಅಶ್ರಫ್, ರಮಾಮಣಿ, ಅಂಗನವಾಡಿ ಶಿಕ್ಷಕಿ, ಶಕುಂತಲಾ ಹಾಜರಿದ್ದು, ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಗೆ ಛದ್ಮವೇಷ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಬಹುಮಾನವನ್ನು ಗಣ್ಯರಿಂದ ಮಕ್ಕಳಿಗೆ ವಿತರಿಸಲಾಯಿತು.