ಮಡಿಕೇರಿ, ನ. 17: ಈ ವರ್ಷದ ಕುರುಂಜಿ ವೆಂಕಟರಮಣ ಗೌಡ ರಾಜ್ಯೋತ್ಸವ ಪ್ರಶಸ್ತಿ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅವರಿಗೆ ಲಭ್ಯವಾಗಿದೆ. ಮಾಧ್ಯಮ, ಸಾಹಿತ್ಯ ಮತ್ತು ಯಕ್ಷಗಾನ ಕ್ಷೇತ್ರದ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
‘ಪುಟ್ಟಕ್ಕ’ ಇವರ ಕಿರು ಕಾದಂಬರಿ. ‘ಪುರಾಣಯಾನ’- ಪುರಾಣ ಪಾತ್ರಗಳನ್ನು ಪರಿಚಯಿಸುವ ಕೋಶ. ‘ರಸ ರಾಮಾಯಣ’ ರಾಮಾಯಣವನ್ನಾಧರಿಸಿದ ರಸಪ್ರಶ್ನೆ ಪುಸ್ತಕ. ‘ಕೊಡಗು ಕ್ವಿಝ್’ ಕೃತಿ ಮುದ್ರಣ ಹಂತದಲ್ಲಿದೆ. ಗಮಕ, ಯಕ್ಷಗಾನ, ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ‘ಪುರಾಣಯಾನ’ ಕೃತಿ ಉಡುಪಿ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಪಠ್ಯ ಪುಸ್ತಕ. ಮಡಿಕೇರಿ ರೇಡಿಯೋ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದಾರೆ.