ನಾಪೆÇೀಕ್ಲು, ನ. 17: ನಾಪೆÇೀಕ್ಲು ಮಹಿಳಾ ಸಮಾಜದಲ್ಲಿ ಮಾನವೀಯ ಸ್ನೇಹಿತರ ಒಕ್ಕೂಟದಿಂದ ಕಾರುಣ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ‘ಶಕ್ತಿ’ ದಿನಪತ್ರಿಕೆಯ ಉಪಸಂಪಾದಕ ಹಾಗೂ ಮಾನವೀಯ ಒಕ್ಕೂಟದ ಮುಖ್ಯಸ್ಥ ಎಂ.ಇ.ಮಹಮ್ಮದ್, ಬಡವರಲ್ಲಿ ತೀರಾ ಬಡವರನ್ನು ಗುರುತಿಸಿ ಅವರಿಗೆ ಸಾಧ್ಯವಾಗುವ ನೆರವನ್ನು ನಮ್ಮ ಒಕ್ಕೂಟದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ನಾಪೆÇೀಕ್ಲುವಿನ ಆಯ್ದ ನಾಲ್ಕು ಕುಟುಂಬಗಳು ಅಂದರೆ, ವಯೋವೃದ್ಧೆ ಲಕ್ಷ್ಮಿ ಅವರಿಗೆ ಆಹಾರದ ಕಿಟ್ ಹಾಗೂ ಕಂಬಳಿ, ಅನಾರೋಗ್ಯ ಪೀಡಿತ ಖಾದರ್ ಅವರ ಕುಟುಂಬಕ್ಕೆ ಪಡಿತರ ಕಿಟ್, ಕಂಬಳಿ ಮತ್ತು ನೈಟಿಗಳು, ಸೂಸನ್ ಜೋಸ್ ಎಂಬವರ ಆಸ್ಪತ್ರೆ ಖರ್ಚಿಗೆ 5 ಸಾವಿರ ರೂ., ವಿದ್ಯುತ್ ಸಂಪರ್ಕವಿಲ್ಲದ ವಿದ್ಯಾರ್ಥಿನಿ ಮಧುಶ್ರೀ ಎಂಬವರಿಗೆ ಸೋಲಾರ್ ದೀಪ, ನಾಪೆÇೀಕ್ಲು ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್‍ನ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದೆ ಎಂದರು.
ನಮ್ಮ ವಾಟ್ಸಪ್ ಗ್ರೂಪ್‍ನ ಒಕ್ಕೂಟದಲ್ಲಿ ಯಾವದೇ ಜಾತಿ, ಧರ್ಮ, ಬೇಧವಿಲ್ಲ. ಕಡು ಬಡವರನ್ನು ಗುರುತಿಸಿ ಸವಲತ್ತು ನೀಡುತ್ತಿರುವ ಏಕೈಕ ವಾಟ್ಸಪ್ ಗ್ರೂಪ್ ನಮ್ಮ ಮಾನವೀಯ ಒಕ್ಕೂಟ ಆಗಿದೆ ಎಂದರು. ಸಮಾಜದಲ್ಲಿ ಇಂತಹ ಒಕ್ಕೂಟಗಳು ಬಲವಾಗಿ ಬೆಳೆಯಬೇಕು. ಜಾತ್ಯಾತೀಯ ಮನೋಭಾವದ ಜನರು ಈ ಒಕ್ಕೂಟಕ್ಕೆ ಹೆಚ್ಚು ಹೆಚ್ಚು ಸೇರಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಮತ್ತೋರ್ವ ಮುಖ್ಯಸ್ಥ ಮೈಕಲ್ ವೇಗಸ್, ಎಲ್ಲಾ ಸದಸ್ಯರು ದಿನಕ್ಕೆ ಒಂದು ರೂ. ನಂತೆ ಸದಸ್ಯತ್ವ ಹಣ ನೀಡುವದರ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಒಕ್ಕೂಟದ ಸದಸ್ಯರು ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನದಂತಹ ಸರಕಾರದ ಸವಲತ್ತುಗಳನ್ನು ಫಲಾನುಭವಿಗಳು ಪಡೆದುಕೊಳ್ಳಲು ಸಹಕರಿಸಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಎಂ.ಇ.ಮಹಮ್ಮದ್ ರಚಿಸಿದ ಧ್ಯೇಯ ಗೀತೆಯನ್ನು ಗಾಯಕಿ ಕಡ್ಲೆರ ತುಳಸಿ ಮೋಹನ್ ಹಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಾದ ಸುಕುಮಾರ್, ಉಮೇಶ್ ಗೌಡ, ರಾಘವೇಂದ್ರ, ಬಶೀರ್, ಖಲೀಲ್, ಪ್ರವೀಣ್, ಕುಶು ಕುಶಾಲಪ್ಪ, ಆಸ್ಕರ್ ಸೇಟ್, ದಿವ್ಯಾ ಮಂದಪ್ಪ, ಚೆರಿ ಚಂಗಪ್ಪ, ಭಾವ ಮಾಲ್ದಾರೆ, ಅಜಿತ್, ಮತ್ತಿತರರು ಇದ್ದರು.