ಮಡಕೇರಿ, ನ. 17: ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವಂತಹ 79 ನಾಗರಿಕ ಪೊಲೀಸ್ ಹುದ್ದೆಗಳಿಗೆ ಆಯ್ಕೆ ಸಂಬಂಧ ಜಿಲ್ಲೆಯ 15 ಕೇಂದ್ರಗಳಲ್ಲಿ ಏಕಕಾಲಕ್ಕೆ ಇಂದು ಲಿಖಿತ ಪರೀಕ್ಷೆ ನಡೆಯಿತು. ಅರ್ಜಿ ಸಲ್ಲಿಸಿದ್ದ 4000 ಮಂದಿಯಲ್ಲಿ 2803 ಮಂದಿ ಪರೀಕ್ಷೆ ಬರೆದರು. 1197 ಮಂದಿ ಗೈರು ಹಾಜರಾಗಿದ್ದರು.
ಕುಶಾಲನಗರ : ಕುಶಾಲನಗರ ವ್ಯಾಪ್ತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಿತು. ಕುಶಾಲನಗರದ ಕೂಡಿಗೆಯಲ್ಲಿ 3 ಶಾಲೆಗಳಲ್ಲಿ, ಸ್ಥಳೀಯ ಸರಕಾರಿ ಪಿಯು ಕಾಲೇಜು, ಕನ್ನಡ ಭಾರತಿ ಪಿಯು ಕಾಲೇಜು, ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು. ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಪರೀಕ್ಷೆ ಕೇಂದ್ರಗಳಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.