ನಾಪೋಕ್ಲು, ನ. 17: ಖಾಸಗಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಕನ ಕಾಲು ಮುರಿಯಲ್ಪಟ್ಟ ಘಟನೆ ನಡೆದಿದೆ.
ನಾಪೋಕ್ಲುವಿನಿಂದ ವೀರಾಜಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ (ಕೆಎ 12 -ಬಿ-8053) ಹಾಗೂ ಆಟೋ (ಕೆಎ-12-ಬಿ-7890) ನಡುವೆ ಕಕ್ಕಬೆ ಪ್ರೌಢಶಾಲೆ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಟೋ ಚಾಲಕ ಅಪ್ಪಚ್ಚು ಎಂಬವರ ಕಾಲು ಮುರಿಯಲ್ಪಟ್ಟಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.