ಗುಡ್ಡೆಹೊಸೂರು, ನ. 17: ಪ್ರತಿ ವರ್ಷ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ; ವಿದೇಶಿ ಪಕ್ಷಿಗಳು ಗುಡ್ಡೆಹೊಸೂರಿಗೆ ಆಗಮಿಸುತ್ತವೆ. ಸುಮಾರು 15 ರಿಂದ 20 ಪಕ್ಷಿಗಳ ಗುಂಪು ವರ್ಷದ 3 ತಿಂಗಳು ಗುಡ್ಡೆಹೊಸೂರು ಸುತ್ತಮುತ್ತ ವಾಸಮಾಡಿ ನಂತರ ತವರಿಗೆ ಹೊರಡುತ್ತವೆ. ಈ ಪ್ರಕ್ರಿಯೆ ಅನೇಕ ವರ್ಷಗಳಿಂದ ನಡೆಯುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮುಂಜಾನೆ ಮಲಗಿದ್ದವರನ್ನು ಎಬ್ಬಿಸುವದು ಕೋಳಿ ಕೂಗುವದರಿಂದ ಆದರೆ ಗುಡ್ಡೆಹೊಸೂರಿನ ನಾಗರಿಕರಿಗೆ ಈ ಪಕ್ಷಿಗಳೆ ‘ಸೈರನ್’ ಮುಂಜಾನೆ 4 ಗಂಟೆಯಾದ ತಕ್ಷಣ ಭಾರಿಶಬ್ದದಿಂದ ಗ್ರಾಮಸ್ಥರನ್ನು ಎಚ್ಚರಿಸುತ್ತವೆ ಹಾಗೂ ಆಕರ್ಷಿಸುತ್ತಿವೆ.
- ಗಣೇಶ್ ಕುಡೆಕ್ಕಲ್