ಸೊಮವಾರಪೇಟೆ, ನ. 17: ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗೋಣಿಕೊಪ್ಪದ ಲಯನ್ಸ್ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ 8 ಕರಾಟೆ ಪಟುಗಳು ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಒಎಲ್‍ವಿ ಪ್ರೌಢಶಾಲೆಯ ದರ್ಶನ್, ರಿಷೀತ್, ಅನನ್ಯ, ಮನಶ್ರೀ, ಸಂತ ಜೋಸೆಫರ ಪ್ರೌಢಶಾಲೆಯ ಜಸ್ಟೀನ್, ಜ್ಞಾನವಿಕಾಸ ಶಾಲೆಯ ಸಿಂಚನ, ಸೃಜನ್, ಸಂಜನ ಭಾಗವಹಿಸಲಿದ್ದಾರೆ. ಇವರಿಗೆ ತರಬೇತುದಾರರಾಗಿ ಶಿವಾನಂದ್, ಮುಖೇಶ್, ಪ್ರಮೋದ್, ಗಣೇಶ್, ಪಳನಿ, ಸಂಕೇತ್ ಮತ್ತು ಅರುಣ್ ಕಾರ್ಯನಿರ್ವಹಿಸಿದರು.