ಮಡಿಕೇರಿ, ನ. 17: ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ ಸಂಘಟಿಸುತ್ತಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ ಅವರು ತಿಳಿಸಿದ್ದಾರೆ.

ಭವಿಷ್ಯದ ಬಾಲ ವಿಜ್ಞಾನಿಗಳನ್ನು ರೂಪಿಸಲು ನೆರವಾಗಿರುವ ಈ ಸಮಾವೇಶದಲ್ಲಿ ವಿದ್ಯಾರ್ಥಿಗಳು ಸಮಾವೇಶದ ಪ್ರಸಕ್ತ ಕೇಂದ್ರ ವಿಷಯವಾದ ಸ್ವಚ್ಛ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಎಂಬ ವಿಷಯದಡಿ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ರೂಪಿಸಿರುವ ವೈಜ್ಞಾನಿಕ ವಿಶ್ಲೇಷಣೆ/ ಅವಲೋಕನದಿಂದ ಅಧ್ಯಯನ ಕೈಗೊಂಡು ಯೋಜನ ವರದಿಯನ್ನು ಮಂಡಿಸಬೇಕಾಗುತ್ತದೆ. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಮುಖ್ಯ ಉದ್ದೇಶ 10-17 ವಯೋಮಾನದ ಮಕ್ಕಳಿಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಡುವದು ಭವಿಷ್ಯದ ಬಾಲ ವಿಜ್ಞಾನಿಗಳನ್ನು ರೂಪಿಸಲು ನೆರವಾಗುವದಾಗಿದೆ. ಈ ಸಮಾವೇಶದಲ್ಲಿ 10 ರಿಂದ 17 ವಯೋಮಾನದ ಯಾವದೇ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸ ಬಹುದಾಗಿದೆ. ಒಂದು ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ಈ ಸಮಾವೇಶದಲ್ಲಿ ಶಾಲೆ ಬಿಟ್ಟ ಮಕ್ಕಳು ಸಹ ಭಾಗವಹಿಸಬಹುದಾಗಿದೆ. ಸಮಾವೇಶವು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟ 3 ಹಂತದಲ್ಲಿ ಜರುಗಲಿದ್ದು 10 ರಿಂದ 14 ವಯೋಮಾನದ ಕಿರಿಯ ಹಾಗೂ 14 ರಿಂದ 17 ವಯೋಮಾನದ ಹಿರಿಯ ವಿಭಾಗದಲ್ಲಿ ಇರಬಹುದಾಗಿದೆ.

ಜಿಲ್ಲಾ ಹಂತದ ಸಮಾವೇಶದಲ್ಲಿ ಮಂಡನೆಯಾಗುವ ಅತ್ಯುತ್ತಮವಾದ 10 ಯೋಜನೆಗಳನ್ನು ಪ್ರತಿ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವದು. ರಾಜ್ಯಮಟ್ಟದಲ್ಲಿ ಒಟ್ಟು 300 ಯೋಜನೆಗಳನ್ನು ವಿದ್ಯಾರ್ಥಿಗಳು ಮಂಡಿಸಲಿದ್ದು, ಇದರಲ್ಲಿ ಅತ್ಯುತ್ತಮವಾದ 30 ಯೋಜನೆಗಳನ್ನು ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳಿಸಲಾಗುವದು. ಈ ಬಾರಿಯ ರಾಜ್ಯ ಮಟ್ಟದ ಸಮಾವೇಶವು ಡಿಸೆಂಬರ್ 16, 18 ರಂದು ಮಂಡ್ಯ ಜಿಲ್ಲೆಯ ಶ್ರೀ ಆದಿ ಚುಂಚನಗಿರಿ ಮಹಾಕ್ಷೇತ್ರ ಇಲ್ಲಿ ಸಂಘಟಿಸಲಾಗುತ್ತಿದ್ದು, ರಾಷ್ಟ್ರ ಮಟ್ಟದ ಸಮಾವೇಶವು ಡಿಸೆಂಬರ್ 27, 31 ರಂದು ಕೇರಳ ರಾಜ್ಯದ ತಿರುವನಂತ ಪುರದಲ್ಲಿ ಆಯೋಜನೆಗೊಳ್ಳಲಿದೆ. ರಾಜ್ಯಮಟ್ಟದ ಸಮಾವೇಶದಲ್ಲಿ ಅಂದಾಜು 1300 ಯೋಜನೆಗಳನ್ನು ರಾಷ್ಟ್ರದ್ಯಂತ ಆಗಮಿಸುವ ಬಾಲ ವಿಜ್ಞಾನಿಗಳು ಮಂಡಿಸಲಿದ್ದಾರೆ.

ಈ ಸಮಾವೇಶದಲ್ಲಿ ಭಾಗವಹಿ ಸಲು ಇಚ್ಚಿಸುವ ಎನ್‍ಸಿಎಸ್‍ಟಿಸಿ ವೆಬ್‍ಸೈಟ್ hಣಣಠಿ://ತಿತಿತಿ.ಟಿಛಿsಛಿ-iಟಿಜiಚಿ.iಟಿ ಇಲ್ಲಿ ಉಚಿತವಾಗಿ ನೋಂದಾಯಿಸಿ ಕೊಳ್ಳುವದು ಕಡ್ಡಾಯವಾಗಿ ವಿದ್ಯಾರ್ಥಿಗಳು ಮೊಬೈಲ್ ಮೂಲಕವು ನೋಂದಾವಣಿ ಮಾಡಿ ನಮೂನೆ ಪಡೆದುಕೊಳ್ಳಬಹುದು. ಪ್ರಸ್ತುತ 27ನೇ ಮಕ್ಕಳ ವಿಜ್ಞಾನ ಸಮಾವೇಶದ ಯೋಜನಾ ಸಾರಾಂಶ ಪ್ರಸಕ್ತ ವಿಜ್ಞಾನ ಪರಿóಷತ್ತಿನ ವೆಬ್‍ಸೈಟ್‍ನಲ್ಲಿ ಲಭ್ಯವಿದ್ದು ತಿತಿತಿ.ಞಡಿvಠಿ.oಡಿg ಆಸಕ್ತ ವಿದ್ಯಾರ್ಥಿಗಳು ಡೌನ್‍ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ವಿಜ್ಞಾನ ಪರಿಷತ್ತಿನ ದೂರವಾಣಿ/ ಮೊಬೈಲ್ 080-26718939 ಮತ್ತು 9483549159 ಹಾಗೂ ಸಮಾವೇಶದ ರಾಜ್ಯ ಸಂಯೋಜಕರಾದ ಸಿ. ಕೃಷ್ಣೆಗೌಡ ಮತ್ತು ಮೊ. 90369 89384, ರಾಜ್ಯ ಶೈಕ್ಷಣಿಕ ಸಂಯೋಜಕರಾದ ಎಸ್.ಎಂ. ಕೊಟ್ರುಸ್ವಾಮಿ ಮೊ. 94496 28680, ಯೋಜನಾ ಸಹಾಯಕರಾದ ಪ್ರಭು ಎಸ್. ಮಠ 9448569245- ಇವರುಗಳನ್ನು ಸಂಪರ್ಕಿಸಬಹುದು ಎಂದು ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ ಅವರು ತಿಳಿಸಿದ್ದಾರೆ.