ಗೋಣಿಕೊಪ್ಪ ವರದಿ, ನ. 16: ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಕೋದಂಡ ಎ. ಪೂವಯ್ಯ ಜ್ಞಾಪಕಾರ್ಥ ಪ್ರಾಥಮಿಕ, ಪ್ರೌಢ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ 7 ತಂಡಗಳು ಜಯಗಳಿಸಿದ್ದು, ಭಾನುವಾರ ಅಂತಿಮ ಹಣಾಹಣಿ ನಡೆಯಲಿದೆ.
ಪ್ರೌಢ ಫಲಿತಾಂಶ: ಬಾಲಕಿಯರಲ್ಲಿ ಲಯನ್ಸ್ ತಂಡವು ಗೋಣಿಕೊಪ್ಪ ಸರ್ಕಾರಿ ಪ್ರೌಡಶಾಲಾ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. 5, 8, 23ನೇ ನಿಮಿಷಗಳಲ್ಲಿ ದೃಷ್ಠಿ ದೇಚಮ್ಮ 3 ಗೋಲು, 18ನೇ ನಿಮಿಷದಲ್ಲಿ ಪ್ರಜ್ವಲಾ ಗೋಲು ಹೊಡೆದರು.
ಬಾಲಕಿಯರಲ್ಲಿ ಚಿನ್ಮಯಾಸ್ ತಂಡವು ಕಾಲ್ಸ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ಚಿನ್ಮಯಾಸ್ ಪರ 1ನೇ ನಿಮಿಷದಲ್ಲಿ ನೇಹಾ, 5ರಲ್ಲಿ ಶ್ರೇಯಾ, 15 ಮತ್ತು 20ನೇ ನಿಮಿಷಗಳಲ್ಲಿ ರೀತು ತಲಾ ಒಂದೊಂದು ಗೋಲು ಹೊಡೆದರು.
ಬಾಲಕರಲ್ಲಿ ಪೊನ್ನಂಪೇಟೆ ಜಿಪಿಯು ತಂಡವು ಲಯನ್ಸ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ಪೊನ್ನಂಪೇಟೆ ಪರ 12ರಲ್ಲಿ ಮೌರ್ಯ, 18ರಲ್ಲಿ ದೇವಯ್ಯ, 19ರಲ್ಲಿ ನಿಶಿಕ್, ಲಯನ್ಸ್ ಪರ 3ರಲ್ಲಿ ಉಜ್ವಲ್, 14ರಲ್ಲಿ ಆಕಾಶ್ ಗೋಲು ಹೊಡೆದರು.
ಪ್ರಾಥಮಿಕ ಫಲಿತಾಂಶ: ಪ್ರಾಥಮಿಕ ಬಾಲಕರಲ್ಲಿ ಪೊನ್ನಂಪೇಟೆ ಸೆಂಟ್ ಆಂಥೋನಿ ತಂಡವು ಡಫೊಡಿಲ್ಸ್ ತಂಡವನ್ನು 6-0 ಗೋಲುಗಳಿಂದ ಮಣಿಸಿತು. ಆಂಥೋನಿ ಪರ 1 ಮತ್ತು 26 ನೇ ನಿಮಿಷಗಳಲ್ಲಿ ಇಶನ್ 2 ಗೋಲು, 6ರಲ್ಲಿ ಚರ್ಮಣ, 8ರಲ್ಲಿ ಕುಶಾಲ್, 12ರಲ್ಲಿ ಅಖಿಲ್, 21ನೇ ನಿಮಿಷದಲ್ಲಿ ಬಿ.ಕೆ. ಕಾಳಪ್ಪ ಒಂದೊಂದು ಗೋಲು ಹೊಡೆದರು.
ಲಯನ್ಸ್ ತಂಡವು 5-0 ಗೋಲುಗಳಿಂದ ಚಿನ್ಮಯಾಸ್ ತಂಡವನ್ನು ಮಣಿಸಿತು. ಲಯನ್ಸ್ ಪರ 10, 28ನೇ ನಿಮಿಷದಲ್ಲಿ ಆಕಾಶ್, 11, 18ನೇ ನಿಮಿಷದಲ್ಲಿ ವರುಣ್ ತಲಾ 2 ಗೋಲು, 22ನೇ ನಿಮಿಷದಲ್ಲಿ ಸಿದ್ದಾಂತ್ 1 ಗೋಲು ಹೊಡೆದರು.
ಸೆಂಟ್ ಆಥೋನಿ ತಂಡವು 10-0 ಗೋಲುಗಳ ಮೂಲಕ ಚಿನ್ಮಯಾಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಆಂಥೋನಿ ಪರ 10, 11, 12, 19ನೇ ನಿಮಿಷಗಳಲ್ಲಿ ಕುಶಾಲ್ 4 ಗೋಲು, 17, 22ರಲ್ಲಿ ಇಶಾನ್ 2 ಗೋಲು, 21, 29ರಲ್ಲಿ ವಚನ್ 2 ಗೋಲು, 6ನೇ ನಿಮಿಷದಲ್ಲಿ ಕೃಷಿಕ್, 18ರಲ್ಲಿ ಕೃತಿಕ್ ತಲಾ ಒಂದೊಂದು ಗೋಲು ಹೊಡೆದರು.
ಲಯನ್ಸ್ ತಂಡವು ಡಫೊಡಿಲ್ಸ್ ವಿರುದ್ಧ 10-0 ಗೋಲುಗಳ ಜಯ ದಾಖಲಿಸಿತು. 4, 11, 20ನೇ ನಿಮಿಷಗಳಲ್ಲಿ ಸೌರವ್ 3 ಗೋಲು, 16, 23ರಲ್ಲಿ ಯಶನ್ 2 ಗೋಲು, 24, 25, 29ರಲ್ಲಿ ಆಕರ್ಶ್ 3 ಗೋಲು, 14ರಲ್ಲಿ ರಜತ್, 21 ರಲ್ಲಿ ಗಣಪತಿ ತಲಾ ಒಂದೊಂದು ಗೋಲು ಹೊಡೆದರು. - ಸುದ್ದಿಮನೆ