ಮಡಿಕೇರಿ, ನ. 16: ಗೋಣಿಕೊಪ್ಪ ಲಯನ್ಸ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ಜೂನಿಯರ್ ವಿಭಾಗದಲ್ಲಿ 45 ಕೆ.ಜಿ - 60 ಕೆ.ಜಿ. ತೂಕದೊಳಪಟ್ಟ ವಿಭಾಗದಲ್ಲಿ 10ನೇ ತರಗತಿಯ ಮೌನ ಎಂ.ಬಿ., ಪೂವಣ್ಣ ಐ.ಕೆ., 9ನೇ ತರಗತಿಯ ಸೋಮಣ್ಣ ಬಿ.ಇ., 8ನೇ ತರಗತಿಯ ಅಯ್ಯಪ್ಪ ಪಿ.ಎ. ಇವರುಗಳು ಪ್ರಥಮ ಸ್ಥಾನ ಗಳಿಸಿ ತಾ. 19 ರಂದು ಬೆಳಗಾಂನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. 9ನೇ ತರಗತಿಯ ರಿಜಾವುಲ್ಲಾ ಅಹಮ್ಮದ್, 8ನೇ ತರಗತಿಯ ಲಿತನ್ ಪಿ.ಪಿ., ನಾಚಪ್ಪ ಎನ್.ಎಂ. ದ್ವಿತೀಯ ಸ್ಥಾನ ಪಡೆದಿರುತ್ತಾರೆ. 10ನೇ ತರಗತಿಯ ಸುಬ್ಬಯ್ಯ ಎಂ.ಜಿ. ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ.
ಮುಖ್ಯ ಶಿಕ್ಷಕಿ ಪ್ರಮೀಳಾ ಪಿ.ಬಿ. ಮಾರ್ಗದರ್ಶನದಲ್ಲಿ ಕರಾಟೆ ತರಬೇತುದಾರ ಕರ್ನಂಡ ಸೋಮಣ್ಣ ತರಬೇತಿ ನೀಡಿದ್ದಾರೆ.