ಕುಶಾಲನಗರ, ನ. 16: ಶಾಸಕರ ನಿಧಿಯಿಂದ ನಿರ್ಮಿಸಿರುವ ಕುಶಾಲನಗರದ ಮುತ್ತಪ್ಪ ದೇವಾಲಯ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ಬೈಚನಹಳ್ಳಿಯ ಯೋಗಾನಂದ ಬಡಾವಣೆಯಲ್ಲಿರುವ ಮುತ್ತಪ್ಪ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದೇವಾಲಯ ಮಂಡಳಿಯ ಬೇಡಿಕೆ ಹಿನೆÀ್ನಲೆ ನೂತನ ರಸ್ತೆ ಅನುಕೂಲ ಕಲ್ಪಿಸಲಿದೆ ಎಂದು ಅಪ್ಪಚ್ಚುರಂಜನ್ ತಿಳಿಸಿದರು. ದೇವಾಲಯದ ಆವರಣದಲ್ಲಿ ಕಾವೇರಿ ನದಿಗೆ ಭಕ್ತಾದಿಗಳಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರಳಲು ಮೆಟ್ಟಿಲುಗಳನ್ನು ನಿರ್ಮಿಸಿಕೊಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವರದ, ಉಪಾಧ್ಯಕ್ಷರುಗಳಾದ ಬಾಬಿ, ಹರೀಂದ್ರನ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ದಿನೇಶ್, ಪ್ರಮುಖರಾದ ಶಶಿ, ಅಶೋಕ್, ಶೇಖರನ್, ಅರ್ಚಕ ಶರತ್ ಗಣೇಶ್, ಬಿಜೆಪಿ ಪ್ರಮುಖರಾದ ಕುಮಾರಪ್ಪ, ವೈಶಾಖ್, ಎಂ.ಎಂ.ಚರಣ್ ಮತ್ತಿತರರು ಇದ್ದರು.