ವೀರಾಜಪೇಟೆ, ನ. 16: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಿ.ಜಿ. ವಿದ್ಯಾ ಜಯ ಸಾಧಿಸಿದಕ್ಕೆ ಅಮ್ಮತ್ತಿ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ಪಕ್ಷದ ಮುಖಂಡ ಮಾಚಿಮಂಡ ಸುವಿನ್ ಗಣಪತಿ, ಪಕ್ಷದ ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ಬಿ. ವಸಂತ, ಬೂತ್ ಮಟ್ಟದ ಸಮಿತಿಯ ರಾಧಾಕೃಷ್ಣ ಎಚ್.ಎ. ಅಭಿಷೇಕ್, ಮುಕ್ಕಾಟೀರ ಬೋಪಣ್ಣ, ಮತ್ತಿತರರು ಹಾಜರಿದ್ದರು.

ಅಮ್ಮತ್ತಿಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಪಿ.ಎಂ.ಶಮೀರ ಅವರು ವಿದೇಶಕ್ಕೆ ತೆರಳಿದ್ದರಿಂದ ಈ ಸ್ಥಾನ ತೆರವಾಗಿತ್ತು.