ಮಡಕೇರಿ, ನ. 16: ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವಂತಹ 79 ನಾಗರಿಕ ಪೊಲೀಸ್ ಹುದ್ದೆಗಳಿಗೆ ಆಯ್ಕೆ ಸಂಬಂಧ ತಾ. 17ರಂದು (ಇಂದು) ಜಿಲ್ಲೆಯ 15 ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ನಡೆಯಲಿದೆ.ಈ ಲಿಖಿತ ಪರೀಕ್ಷೆ ಸಂಬಂಧ ಅರ್ಹ ಅಭ್ಯರ್ಥಿಗಳು ಬೆಳಿಗ್ಗೆ 10 ಗಂಟೆಗೆ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದು, ಮುಖ್ಯಸ್ಥರ ಬಳಿ ತಮ್ಮ ಉಪಸ್ಥಿತಿ ಖಾತರಿಪಡಿಸಿಕೊಳ್ಳತಕ್ಕದ್ದು. ಹಗಲು 11 ಗಂಟೆಯಿಂದ 12.30ರ ಅವಧಿಯಲ್ಲಿ ಪೂರ್ವ ನಿಗದಿಯಂತೆ ಪರೀಕ್ಷೆ ಜರುಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ನೆನಪಿಸಿದ್ದಾರೆ. ಈಗಾಗಲೇ ಖಾಲಿ ಹುದ್ದೆಗಳ ಭರ್ತಿಗಾಗಿ 4 ಸಾವಿರದಷ್ಟು ಮಂದಿ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.