ಮಡಿಕೇರಿ, ನ. 14: ಮಡಿಕೇರಿಯ ಮಾನವೀಯ ಸ್ನೇಹಿತರ ಒಕ್ಕೂಟ ದಿಂದ ತಾ. 16 ರಂದು (ನಾಳೆ) ನಾಪೋಕ್ಲುವಿನಲ್ಲಿ ನಾಲ್ಕು ಬಡ ಕುಟುಂಬಗಳಿಗೆ ಕೆಲವು ಸವಲತ್ತು ಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ.

ಅಂದು ಮಧ್ಯಾಹ್ನ 2.30 ಕ್ಕೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಹಿರಿಯ ಸದಸ್ಯ ಎಂ.ಇ. ಮಹಮದ್ ವಹಿಸಲಿದ್ದು; ಒಕ್ಕೂಟದ ವಕ್ತಾರ ಮೈಕಲ್ ವೇಗಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎರಡು ಬಡ ಕುಟುಂಬಗಳಿಗೆ ಆಹಾರದ ಕಿಟ್, ಅರ್ಬುದ ರೋಗದಿಂದ ಬಳಲುತ್ತಿ ರುವ ವ್ಯಕ್ತಿಯೊಬ್ಬರಿಗೆ ನಗದು ಹಣ, ಮನೆಯಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದೆ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಓದುತ್ತಿರುವ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿನಿ ಯೊಬ್ಬಳಿಗೆ ಹೊಸ ಸೋಲಾರ್ ದೀಪದ ವ್ಯವಸ್ಥೆ ಹಾಗೂ ಅಲ್ಲಿನ ಪುನಶ್ಚೇತನ ಸಂಸ್ಥೆಯಲ್ಲಿರುವ ವಿಶೇಷ ಅಗತ್ಯತೆ ಉಳ್ಳ ವಿದ್ಯಾರ್ಥಿ ಗಳಿಗೆ ನಿತ್ಯ ಬಳಕೆಯ ಪರಿಕರ ನೀಡಲಾಗುವದು ಎಂದು ಒಕ್ಕೂಟದ ಸದಸ್ಯ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.