ಮಡಿಕೇರಿ, ನ. 14: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚೇತನ್ ಅವರನ್ನು ಮೈಸೂರಿನ ಕೆ.ಆರ್. ನಗರ ಠಾಣೆಗೆ ವರ್ಗಾಯಿಸಲಾಗಿದೆ. ತೆರವುಗೊಂಡಿ ರುವ ಸ್ಥಾನಕ್ಕೆ ಬಂಟ್ವಾಳ ಪೊಲೀಸ್ ಠಾಣಾಧಿಕಾರಿಯಾಗಿದ್ದ ಚಂದ್ರಶೇಖರ್ ಅವರು ನಿಯುಕ್ತಿಗೊಂಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ದಯಾನಂದ ಅವರನ್ನು ಬೆಳ್ಳೂರು ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು; ತೆರವುಗೊಳ್ಳಲಿರುವ ಸ್ಥಾನಕ್ಕೆ ಇನ್ನಷ್ಟೇ ನಿಯುಕ್ತಿಯಾಗ ಬೇಕಿದೆ.