ಸುಂಟಿಕೊಪ್ಪ, ನ. 14: ಅಪ್ರಾಪ್ತೆ ಮೇಲೆ ತೋಟದ ಚಾಲಕ ಹಾಗೂ ರೈಟರ್ ವೃತ್ತಿ ಮಾಡುತ್ತಿದ್ದಾತ ಅತ್ಯಾಚಾರ ನಡೆಸಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ತೋಟದಲ್ಲಿ ರೈಟರ್ ಹಾಗೂ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ವಿವಾಹಿತ ಲೋಕೇಶ್ ಎಂಬಾತ 14 ವರ್ಷದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಕಳೆದ 10 ದಿನಗಳ ಹಿಂದೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.ಅಪ್ರಾಪ್ತೆ ಮತ್ತು ಪೋಷಕರ ದೂರನ್ನು ದಾಖಲಿಸಿಕೊಂಡ ಸುಂಟಿಕೊಪ್ಪ ಪೊಲೀಸರು ಲೋಕೇಶ್ ವಿರುದ್ಧ ದೂರು ದಾಖಲಿಸಿದ್ದು, ಪೋಕ್ಸೋ ಕಾಯ್ದೆಯಡಿ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.