ಸೋಮವಾರಪೇಟೆ,ನ.15: ಕೊಡಗು ಗೌಡ ಸಮಾಜದ ತಾಲೂಕು ಘಟಕದ ವತಿಯಿಂದ ತಾ.17ರಂದು ಇಲ್ಲಿನ ಸಾಂದೀಪನಿ ಶಾಲಾ ಆವರಣದಲ್ಲಿ ‘ನಮ್ಮವರ ಸಂತೋಷ ಕೂಟ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ ದಂಡಿನ ಎಂ. ಉತ್ತಯ್ಯ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9ಗಂಟೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಸೂದನ ಎನ್. ಸೋಮಣ್ಣ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲೆಯ ವೈಲ್ಡ್ ಲೈಫ್ ಎಸಿಎಫ್ ದೇವಜನ ದಯಾನಂದ, ಸಾಂದೀಪನಿ ಶಾಲಾ ಮಾಲೀಕರಾದ ಮೂಡಗದ್ದೆ ಡಿ. ಲಿಖಿತ್ ದಾಮೋದರ್ ಭಾಗವಹಿಸಲಿದ್ದಾರೆ.
ಜನಾಂಗ ಬಾಂಧವರ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳು ಹಾಗೂ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭ 7ನೇ ತರಗತಿ, 10ನೇ ತರಗತಿ, ಪಿಯುಸಿ ಹಾಗೂ ಉನ್ನತ ವ್ಯಾಸಂಗದಲ್ಲಿ ಹೆಚ್ಚು ಅಂಕಗಳಿಸಿದ ಸಮಾಜ ಬಾಂಧವರ ಮಕ್ಕಳಿಗೆ ಬಹುಮಾನ ನೀಡಲಾಗುವದು ಎಂದು ಮಾಹಿತಿ ನೀಡಿದ್ದಾರೆ.