ಗೋಣಿಕೊಪ್ಪ ವರದಿ, ನ. 15 ; ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಕೋದಂಡ ಎ. ಪೂವಯ್ಯ ಜ್ಞಾಪಕಾರ್ಥ ಪ್ರಾಥಮಿಕ ಬಾಲಕ, ಬಾಲಕಿಯರ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ 6 ತಂಡಗಳು ಗೆಲವು ಸಾಧಿಸಿವೆ.
ಚಿನ್ಮಯಾಸ್ ವಿದ್ಯಾಲಯದ ಬಾಲಕ, ಬಾಲಕಿಯರ ತಂಡ, ಗೋಣಿಕೊಪ್ಪ ಲಯನ್ಸ್ ಬಾಲಕಿಯರ ತಂಡ ಸೋಲಿಲ್ಲದ ತಂಡವಾಗಿ ಹೊರ ಹೊಮ್ಮಿತು. ಡಫೋಡಿಲ್ಸ್, ರೂಟ್ಸ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ತಂಡಗಳು ಉತ್ತಮ ಹೋರಾಟ ನಡೆಸಿ ಗಮನ ಸೆಳೆದವು.
ಬಾಲಕರ ವಿಭಾಗ ; ಬಾಲಕರಲ್ಲಿ ಚಿನ್ಮಯಾಸ್ ವಿದ್ಯಾಲಯ ತಂಡವು ಭಾರತೀಯ ವಿದ್ಯಾಭವನ್ ಕೊಡಗು ವಿದ್ಯಾಲಯ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಚಿನ್ಮಯಾಸ್ ಪರ 6 ಮತ್ತು 8 ನೇ ನಿಮಿಷದಲ್ಲಿ ರತನ್ 2 ಗೋಲು, ಕೊಡಗು ವಿದ್ಯಾಲಯ ಪರ 22 ನೇ ನಿಮಿಷದಲ್ಲಿ ಜಶನ್ 1 ಗೋಲು ಹೊಡೆದರು.
2 ನೇ ಪಂದ್ಯದಲ್ಲಿ ಕೂಡ ಚಿನ್ಮಯಾಸ್ ವಿದ್ಯಾಲಯ ತಂಡವು ಡಫೊಡಿಲ್ಸ್ ವಿರುದ್ಧ 5-1 ಗೋಲುಗಳ ಜಯ ಗಳಿಸಿತು. ಚಿನ್ಮಯಾಸ್ ಪರ 6, 10, 23 ನೇ ನಿಮಿಷಗಳಲ್ಲಿ ಚೇತನ್ 3 ಗೋಲು, 8 ನೇ ನಿಮಿಷದಲ್ಲಿ ಪತನ್, 24 ರಲ್ಲಿ ಸಾಯ್ ಕರಣ್ ಗೋಲು ಬಾರಿಸಿದರು. ಡಫೊಡಿಲ್ಸ್ ಪರ 28 ರಲ್ಲಿ ಸಂಕಲ್ಪ್ 1 ಗೋಲು ಹೊಡೆದರು.
ಬಾಲಕಿಯರ ವಿಭಾಗ : ಪ್ರಾಥಮಿಕ ಬಾಲಕಿಯರಲ್ಲಿ ಚಿನ್ಮಯಾಸ್ ವಿದ್ಯಾಲಯ ತಂಡವು ಡಫೋಡಿಲ್ಸ್ ತಂಡದ ವಿರುದ್ಧ 2-0 ಗೋಲುಗಳ ಜಯ ಪಡೆಯಿತು. ಚಿನ್ಮಯಾಸ್ ಪರ 8 ನೇ ನಿಮಿಷದಲ್ಲಿ ಎ. ನೇಹಾ, 9 ನೇ ನಿಮಿಷದಲ್ಲಿ ವಿನಿಶಾ ಒಂದೊಂದು ಗೋಲು ಹೊಡೆದರು.
ಚಿನ್ಮಯಾಸ್ ವಿದ್ಯಾಲಯ ತಂಡವು ರೂಟ್ರ್ಸ್ ವಿರುದ್ಧ 5-2 ಗೋಲುಗಳ ಜಯಗಳಿಸಿತು. ಚಿನ್ಮಯಾಸ್ ಪರ 5, 24 ರಲ್ಲಿ ಪೂಜಾ, 20, 23 ರಲ್ಲಿ ರೀತು ತಲಾ 2 ಗೋಲು, 29 ರಲ್ಲಿ ಶೃಗ್ಯಾ, ರೂಟ್ರ್ಸ್ ಪರ 16 ರಲ್ಲಿ ದೃಶ್ಯ, 22 ರಲ್ಲಿ ಪ್ರಜ್ಞಾ ಒಂದೊಂದು ಗೋಲು ಹೊಡೆದರು.
ಗೋಣಿಕೊಪ್ಪ ಲಯನ್ಸ್ ತಂಡವು ರೂಟ್ಸ್ ತಂಡವನ್ನು 7-1 ಗೋಲುಗಳಿಂದ ಮಣಿಸಿತು. ಲಯನ್ಸ್ ಪರ 4, 9, 12, 23 ನೇ ನಿಮಿಷಗಳಲ್ಲಿ ದೃಷ್ಠಿ 4 ಗೋಲು, 11, 27 ನೇ ನಿಮಿಷಗಳಲ್ಲಿ ಪ್ರಾಪ್ತಿ 2 ಗೋಲು, 18 ನೇ ನಿಮಿಷದಲ್ಲಿ ದಿಷಾ 1 ಗೋಲು, ರೂಟ್ರ್ಸ್ ಪರ 29 ನೇ ನಿಮಿಷದಲ್ಲಿ ಸಿಂಚನಾ 1 ಗೋಲು ಹೊಡೆದರು.
2 ನೇ ಪಂದ್ಯವಾಡಿದ ಗೋಣಿಕೊಪ್ಪ ಲಯನ್ಸ್ ತಂಡವು ಡಫೊಡಿಲ್ಸ್ ವಿರುದ್ಧ 3-0 ಗೋಲುಗಳ ಜಯ ಸಾಧಿಸಿತು. ಲಯನ್ಸ್ ಪರ 2 ಮತ್ತು 17 ನೇ ನಿಮಿಷಗಳಲ್ಲಿ ದೃಷ್ಟಿ 2 ಗೋಲು ಹೊಡೆದರು. 23 ನೇ ನಿಮಿಷದಲ್ಲಿ ಶಿವಾಲಿ 1 ಗೋಲು ಹೊಡೆದರು.