ಗೋಣಿಕೊಪ್ಪ ವರದಿ, ನ. 15: ಹುಣಸೂರು ಮತ್ತು ಪಿರಿಯಾಪಟ್ಟಣ ರೋಟರಿ ಕ್ಲಬ್ ಸಹಯೋಗದಲ್ಲಿ ಹುಣಸೂರು ರೋಟರಿ ಸಭಾಂಗಣದಲ್ಲಿ ಇತ್ತಿಚೇಗೆ ರೋಟರಿ ವಲಯ ಕಲಾಸಂಗಮ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ಆರು ಬಹುಮಾನಗಳನ್ನು ತನ್ನದಾಗಿಸಿ ಕೊಂಡಿತು. ಕಿರು ನಾಟಕ ಸ್ಪರ್ಧೆಯಲ್ಲಿ ಪ್ರಥಮ, ಸಮೂಹ ಗಾಯನ ಮತ್ತು ಸಮೂಹ ನೃತ್ಯ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿತು. ಏಕವ್ಯಕ್ತಿ ಗಾಯನದಲ್ಲಿ ಡಾ. ಆಶಿಕ್ ಚೆಂಗಪ್ಪ ಅವರಿಗೆ ದ್ವಿತೀಯ ಸ್ಥಾನ, ಸುಮಿ ಸುಬ್ಬಯ್ಯ ತೃತೀಯ, ಯುಗಳ ಗೀತೆಯಲ್ಲಿ ವಿದ್ಯಾ ಹಾಗೂ ನಾರಾಯಣ್ ತೃತೀಯ ಸ್ಥಾನ ಪಡೆದರು. ಒಟ್ಟು 6 ಬಹುಮಾನ ತನ್ನದಾಗಿಸಿಕೊಂಡಿತು.
ವಲಯ 6 ರ ಸಹಾಯಕ ಗವರ್ನರ್ ಪಿ. ನಾಗೇಶ್, ವಲಯ ಕಾರ್ಯದರ್ಶಿ ಎಚ್.ಟಿ. ಅನಿಲ್ ಬಹುಮಾನ ವಿತರಿಸಿದರು. ಈ ಸಂದರ್ಭ ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನವೀನ್, ಕಾರ್ಯದರ್ಶಿ ಪೂಣಚ್ಚ ಇದ್ದರು ಎಂದು ರೋಟರಿ ಪ್ರಕಟಣೆ ತಿಳಿಸಿದೆ.