ಚೆಟ್ಟಳ್ಳಿ, ನ. 15: ವೀರಾಜಪೇಟೆಯ ಅನ್ವಾರುಲ್ ಹುದಾ ಅಧೀನದಲ್ಲಿ ಕಾರ್ಯ ಚರಿಸುತ್ತಿರುವ ಮಖ್ದೂಮಿಯಾ ಸುನ್ನಿ ಮದರಸದಲ್ಲಿ ಪ್ರವಾದಿ ಮುಹಮದ್ (ಸ.ಅ) 1494ನೇ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.

ಸಂಸ್ಥೆಯ ಸಾರಥಿಗಳಾದ ಶೈಖುನಾ ಅಹ್ಸನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮವನ್ನು ಮುಖ್ಯೋಪಾಧ್ಯಾಯ ಅಬ್ದುಲ್ ಜಲೀಲ್ ಸಖಾಫಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಸಬ್ ಇನ್ಸ್‍ಪೆಕ್ಟರ್ ಮರಿಸ್ವಾಮಿ ಮಾತನಾಡಿ, ಪ್ರವಾದಿ (ಸ.ಅ) ಅವರ ಜೀವನ ಹಾಗೂ ಅವರ ಅನುಯಾಯಿಗಳ ಮಾದರಿ ಜೀವನದ ಕುರಿತು ವಿವರಿಸಿದರು.

ಸಂಸ್ಥೆಯ ಪ್ರಾಧ್ಯಾಪಕ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ಹಾಗೂ ಶಾಫಿ ಅನ್ವಾರಿ ಅಸ್ಸಖಾಫಿ ಶುಭ ಕೋರಿದರು.

ಅಧ್ಯಾಪಕರಾದ ಖಮರುದ್ದೀನ್ ಅನ್ವಾರಿ ಅಸ್ಸಖಾಫಿ, ಜುನ್ಯೆದ್ ಅನ್ವಾರಿ ಅಲ್ ಅಹ್ಸನಿ, ಇಬ್ರಾಹಿಂ ಮಾಷ್ಟರ್, ಮಖ್ದೂಮಿಯಾ ಉಪಾಧ್ಯಕ್ಷ ಷಂಶುದ್ದೀನ್, ಕೋಶಾಧಿಕಾರಿ ಶಫೀಕ್, ಕಾರ್ಯದರ್ಶಿ ಅಲಿ, ಶರೀಫ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಅಮೀನಿ ಸ್ವಾಗತಿಸಿ, ವಂದಿಸಿದರು.