ಕುಶಾಲನಗರ, ನ. 13: ಸಂಘ-ಸಂಸ್ಥೆಗಳು ವಿಶೇಷಚೇತನರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ ಎಂದು ರೋಟರಿ ಇನ್ನರ್ ವೀಲ್ ಚೇರ್ಮನ್ ಅನುರಾಧ ನಂದಕುಮಾರ್ ಸಲಹೆಯಿತ್ತರು. ಕುಶಾಲನಗರಕ್ಕೆ ಭೇಟಿ ನೀಡಿದ್ದ ಸಂದರ್ಭ ಇನ್ನರ್ ವೀಲ್ ಕ್ಲಬ್‍ನ ಲೋಗೋ ಫೆÇೀಲ್ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷಚೇತನರ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಅಭಿಮಾನದೊಂದಿಗೆ ಮಾನವೀಯತೆ ತೋರಬೇಕಿದೆ ಎಂದರು.

ಇದೇ ಸಂದರ್ಭ ರೋಟರಿ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಅಧ್ಯಕ್ಷ ಅಶೋಕ್ ಇನ್ನರ್ ವೀಲ್ ಕ್ಲಬ್ ಲಾಂಛನ ಬಿಡುಗಡೆ ಮಾಡಿದರು. ಆನಂತರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್‍ನ ಬುಲೆಟಿನ್ ಬಿಡುಗಡೆಗೊಳಿಸಲಾಯಿತು. ಕ್ಲಬ್‍ನ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಕುಶಾಲನಗರ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಕವಿತಾ ಸಾತಪ್ಪನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕ್ಲಬ್ ಉಪಾಧ್ಯಕ್ಷೆ ಶಾಲಿನಿ ನರೇಂದ್ರ, ಕಾರ್ಯದರ್ಶಿ ನೇಹಾ ಜಗದೀಶ್, ಖಜಾಂಚಿ ತೇಜಸ್ವಿನಿ ಗೌತಮ್, ಇನ್ನರ್ ವೀಲ್ ಎಡಿಟರ್ ಚಿತ್ರಾ ರಮೇಶ್, ಸಾಕ್ಷರತಾ ಸಂಯೋಜಕ ಅಶ್ವಿನಿ ರೈ, ಐ.ಎಫ್.ಓ. ಜಾಸ್ಮಿನ್ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷರಾದ ರೇಖಾ ಗಂಗಾಧರ್, ಸುಪ್ರೀತಾ ರವಿ, ಸುನಿತಾ ಮಹೇಶ್ ಅವರು ಉಪಸ್ಥಿತರಿದ್ದರು.