ವೀರಾಜಪೇಟೆ, ನ. 13: ವೀರಾಜಪೇಟೆ ಪಟ್ಟಣದಲ್ಲಿರುವ ಅನಧಿಕೃತ ಕಟ್ಟಡಗಳು ಹಾಗೂ ಮೀನುಪೇಟೆಯಲ್ಲಿರುವ ಮೊಬೈಲ್ ಟವರ್ನ್ನು ತೆರವು ಗೊಳಿಸಲು ಆದೇಶಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.ಪಟ್ಟಣ ಪಂಚಾಯತ್ ವ್ಯಾಪ್ತಿಯ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆಯ ತರಿಕುಟ್ಟಿ ಹಾಜಿಯ 11ನೇ ಬ್ಲಾಕ್ ಸ.ಸಂಖ್ಯೆ 31/2, 31/2 ರಲ್ಲಿ 303.51 ಚ.ಮಿ ಆಸ್ತಿಯಲ್ಲಿ ಕಾನೂನು ಬಾಹಿರವಾಗಿ ಅನುಮತಿ ರಹಿತವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. 11ನೇ ಬ್ಲಾಕ್ ಸ.ಸಂ 31/3ಸಿ ಯಲ್ಲಿ ಮಿಸ್ಬ ಅಂಜುಮ್ ಆಲಿಯಾಸ್ ಅಶ್ರಫ್ ರಹೀಂ ಎಂಬವರು 196.67 ಚ.ಮೀ ಆಸ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರಿಂದ ಪುರಸಭೆ 1964ರ ನಿಯಮ 187ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕಟ್ಟಡ ನಿರ್ಮಾಣದ ಪ್ರತಿ ಹಂತದಲ್ಲೂ ಪಟ್ಟಣ ಪಂಚಾಯಿತಿಯಿಂದ ನೋಟಿಸ್ ಜಾರಿ ಮಾಡಲಾಗಿದ್ದರೂ ಸಹ ಕಟ್ಟಡ ಮಾಲೀಕರು ನಿರ್ಲಕ್ಷ್ಯ ಮಾಡಿ ಇವರುಗಳು ಕರ್ನಾಟಕ ಪುರಸಭಾ
(ಮೊದಲ ಪುಟದಿಂದ) ಅಧಿನಿಯಮ ಕಾನೂನನ್ನು ಪಾಲಿಸದ ಕಾರಣ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಕ್ಕಾಗಿ ಜಿಲ್ಲಾಧಿಕಾರಿ ಮೊರೆ ಹೋಗಿರುವದಾಗಿ ತಿಳಿಸಿದ್ದಾರೆ.ಪಟ್ಟಣದ ಮೀನುಪೇಟೆ ರಸ್ತೆಯ ರಾಜ್ಯ ಹೆದ್ದಾರಿ ಬದಿಯಲ್ಲಿ ಸ.ಸಂ 31/1 ರ ನಬೀಸಾ ಅವರ ಜಾಗದಲ್ಲಿ ನಿರ್ಮಿಸಿರುವ ಮೊಬೈಲ್ ಟವರ್ ನಿರ್ಮಾಣ ಅವೈಜ್ಞಾನಿಕವಾಗಿದ್ದು ಸ್ಥಳೀಯರಿಗೆ ಅಪಾಯಕಾರಿಯಾಗಿದೆ. ರಾಜ್ಯ ಹೆದ್ದಾರಿ ನಿಯಮ ಉಲ್ಲಂಘಿಸಿ ಟವರ್ ನಿರ್ಮಾಣ ಮಾಡಲಾಗಿದ್ದು ಕರ್ನಾಟಕ ಮುನಿಸಿಪಾಲಿಟಿ ಆಕ್ಟ್ 1964 ಸೆಕ್ಷನ್ 187(9)(ಸಿ) ಅಡಿಯಲ್ಲಿ ತೆರವುಗೊಳಿಸಲು ಆದೇಶ ನೀಡಲು ಮನವಿ ಮಾಡಲಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.