ಗೋಣಿಕೊಪ್ಪ, ನ. 13: ಗೋಣಿಕೊಪ್ಪ-ವೀರಾಜಪೇಟೆ ಮುಖ್ಯ ರಸ್ತೆಯ ಹಾತೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ರಸ್ತೆ ದಾಟುತ್ತಿದ್ದ ಅಮ್ಮತ್ತಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾಗಿರುವ ಕೊಂಗೆಪಂಡ ಕುಟ್ಟಪ್ಪ ಅವರ ತಾಯಿ ಹಾತೂರು ಗ್ರಾಮದ ಕೊಂಗೆಪಂಡ ಕೊಂಗೆಪಂಡ ಕುಟ್ಟಪ್ಪ ಅವರ ತಾಯಿ ಹಾತೂರು ಗ್ರಾಮದ ಕೊಂಗೆಪಂಡ 12ರ ಸುಮಾರಿಗೆ ತಂಗಮ್ಮ ಹಾತೂರು ಶಾಲೆ ಬಳಿ ಇರುವ ಸೊಸೈಟಿಗೆ ತೆರಳಿ ಸೀಮೆ ಎಣ್ಣೆ ಪಡೆದುಕೊಂಡು ಮನೆಗೆ ತೆರಳಲು ರಸ್ತೆಯಲ್ಲಿ ನಿಂತಿದ್ದರು.ಈ ಸಂದರ್ಭ ರಸ್ತೆಯ ಇನ್ನೊಂದು ಭಾಗದಲ್ಲಿ ಬಂಧುಗಳು ನಿಂತಿರುವ ದನ್ನು ಕಂಡ ತಂಗಮ್ಮ ಅವರನ್ನು ಮಾತನಾಡಿಸುವ (ಮೊದಲ ಪುಟದಿಂದ) ಧಾವಂತದಲ್ಲಿ ರಸ್ತೆ ದಾಟುತ್ತಿದ್ದರು.ಈ ಸಂದರ್ಭ ವೀರಾಜಪೇಟೆ ಯಿಂದ ಹಾತೂರು, ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಬರುತ್ತಿರು ವದನ್ನು ತಂಗಮ್ಮ ಕಾಣಲಿಲ್ಲ. ರಸ್ತೆ ಇನ್ನೊಂದು ಬದಿಯಲ್ಲಿದ್ದ ಬಂಧುಗಳು ಬಸ್.. ಬಸ್... ಎಂದು ಕೂಗಿಕೊಂಡರೂ ವಿಪರೀತವಾದ ಗಾಳಿಯ ಸದ್ದಿಗೆ ತಂಗಮ್ಮಳಿಗೆ ಬಂಧುಗಳ ಧ್ವನಿ ಕೇಳಿಸಲೇ ಇಲ್ಲ. ವೇಗದಿಂದ ಬಂದ ಬಸ್ (ಕೆಎ-10ಎಫ್-0310) ತಂಗಮ್ಮ ಅವರಿಗೆ ಡಿಕ್ಕಿ ಪಡಿಸಿದ ಹಿನ್ನೆಲೆಯಲ್ಲಿ ಬಸ್ಸಿನ ಚಕ್ರ ಹರಿದ ಪರಿಣಾಮ ತಲೆ ಸಂಪೂರ್ಣ ಜಜ್ಜಿ ಹೋಗಿದ್ದು ಕಾಲು ಕೂಡ ಮುರಿದಿದ್ದು ಸ್ಥಳದಲ್ಲೆ ಅಸು ನೀಗಿದ್ದಾರೆ. ಅಲ್ಲಿದ್ದ ಜನತೆ ಗುಂಪು ಗುಂಪಾಗಿ ಸೇರುತ್ತಿದ್ದಂತೆಯೇ ಬಸ್ಸಿನ ಚಾಲಕ ಸ್ಥಳದಿಂದ ಓಟಕ್ಕಿತ್ತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್‍ಪಿ ಜಯಕುಮಾರ್,ಸರ್ಕಲ್ ಇನ್ಸ್‍ಪೆÉಕ್ಟರ್ ರಾಮರೆಡ್ಡಿ, ಠಾಣಾಧಿಕಾರಿ ಸುರೇಶ್ ಬೋಪಣ್ಣ, ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೃತ ದೇಹವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಿ ಮಹಜರು ನಡೆಸಿದರು. ರಸ್ತೆಗೆ ಬ್ಯಾರಿಕೇಡ್ ಅಳವಡಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರು.

ಅಪಘಾತ ಸಂಭವಿಸಿದ ಸ್ಥಳವು ಅಪಘಾತ ವಲಯವಾಗಿದ್ದು ರಸ್ತೆ ಬದಿಯಲ್ಲಿ ನಾಮ ಫಲಕ ಅಳವಡಿಸಿದ್ದಾರೆ. ಇದೇ ಸ್ಥಳದಲ್ಲಿ ಈ ಹಿಂದೆಯೂ ಅಪಘಾತ ಸಂಭವಿಸಿ ಹಲವರು ಮೃತಪಟ್ಟಿದ್ದರು. ನಂತರ ಸಾರ್ವಜನಿಕರ, ಸಂಘಸಂಸ್ಥೆಯ ಒತ್ತಾಯದ ಮೇರೆ ಅಪಘಾತ ತಡೆಯಲು ಮುಖ್ಯ ರಸ್ತೆಗೆ ಉಬ್ಬು ನಿರ್ಮಿಸಲಾಗಿತ್ತು. ನಂತರ ಸರ್ಕಾರದ ನಿಯಮದಂತೆ ರಸ್ತೆ ಉಬ್ಬು ತೆರವುಗೊಳಿಸಲಾಗಿತ್ತು. ನಂತರ ಪೊಲೀಸರು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಿ ದ್ದರು. ಇತ್ತೀಚೆಗೆ ಈ ಬ್ಯಾರಿಕೇಡ್ ಕೂಡ ತೆರವು ಗೊಳಿಸ ಲಾಗಿತ್ತು. ಇಳಿ ಜಾರಿನಿಂದ ರಭಸವಾಗಿ ವಾಹನಗಳು ಚಲಿಸುತ್ತಿರು ವದರಿಂದ ಈ ಭಾಗದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತ್ತಿವೆ.

ಇಂದಿನ ಈ ದುರ್ಘಟನೆ ಸಂಬಂಧ ಮೊಕ್ಕದೆ ದಾಖಲಿಸಿ ಕೊಂಡಿರುವ ಪೊಲೀಸರು ಬಸ್ ಚಾಲಕ ಹೆಚ್. ಚಂದ್ರಪ್ಪ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ.

-ಹೆಚ್.ಕೆ. ಜಗದೀಶ್