ಮಡಿಕೇರಿ, ನ. 13: ಪ್ರಾಕೃತಿಕ ವಿಕೋಪ ಹಾನಿಯ ತುರ್ತು ಕಾಮಗಾರಿಗಳ ಸಂಬಂಧ, ಸರಕಾರ ದಿಂದ ಲಭಿಸಿದ್ದ ಅನುದಾನದಲ್ಲಿ ರೂ. 21 ಕೋಟಿಯನ್ನು ಜಿಲ್ಲಾಧಿ ಕಾರಿಗಳು ಪಂಚಾಯತ್ ರಾಜ್ ಇಲಾಖೆಗೆ ಬಿಡುಗಡೆಗೊಳಿಸಿದ್ದನ್ನು ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಯಲ್ಲಿ ಇರಿಸಿದ್ದ ಪ್ರಕರಣ ಇದೀಗ ಅಂತ್ಯ ಕಂಡಿದೆ.
ಈ ಬಗ್ಗೆ ಜಿ.ಪಂ. ಆಡಳಿತ ಹಾಗೂ ಜನಪ್ರತಿನಿಧಿಗಳ ಒತ್ತಾಸೆ ಮೇರೆಗೆ ತಾ. 7 ರಂದು ಕರ್ನಾಟಕ ಪಂಚಾಯತ್‍ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್. ರಂಗನಗೌಡ ಆದೇಶ ಹೊರಡಿಸಿ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಎಲ್. ಶ್ರೀಕಂಠಯ್ಯ ಹಾಗೂ ಲೆಕ್ಕಾಧೀಕ್ಷಕ ಶ್ರೀಧರಮೂರ್ತಿ ಅವರಿಬ್ಬರನ್ನು ಅಮಾನತುಗೊಳಿಸಿದ್ದರು.ಅಮಾನತು ಆದೇಶಕ್ಕೆ ತಡೆ (ಮೊದಲ ಪುಟದಿಂದ) ಆ ಬೆನ್ನಲ್ಲೇ ಸಂಬಂಧಿಸಿದ ಅಧಿಕಾರಿಗಳಿಬ್ಬರು ಕರ್ನಾಟಕ ಆಡಳಿತ ಪ್ರಾಧಿಕಾರ ಮುಂದೆ ಮೇಲ್ಮನವಿ ಸಲ್ಲಿಸಿ, ನ್ಯಾಯಕ್ಕಾಗಿ ಮೊರೆ ಹೋಗಿದ್ದರು. ಇದೀಗ ಪ್ರಾಧಿಕಾರವು ಅಮಾನತು ಆದೇಶ ರದ್ದುಗೊಳಿಸಿ, ಈ ಇಬ್ಬರು ಅಧಿಕಾರಿಗಳನ್ನು ಕರ್ತವ್ಯದಲ್ಲಿ ಮುಂದುವರಿಯುವಂತೆ ನಿರ್ದೇಶನ ನೀಡಿರುವದಾಗಿ ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ.