ವೀರಾಜಪೇಟೆ, ನ. 9: ಭಾರತೀಯ ಸೇನೆಯಲ್ಲಿ ರಾಷ್ಟ್ರಾದ್ಯಂತ 34 ತರಬೇತಿ ಕೇಂದ್ರಗಳಿದ್ದು, ಗುಣ ಮಟ್ಟದ ತರಬೇತಿ ನೀಡಿ ಶಿಸ್ತಿನ ಸಿಪಾಯಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಎಲ್ಲ ರೀತಿಯಿಂದಲೂ ರಾಷ್ಟ್ರದ ಭದ್ರತೆಯ ಸೇವೆ ನಮ್ಮ ಉದ್ದೇಶ ಎಂದು ಭೂ ಸೇನಾ ತರಬೇತಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಟ್ಟಚೆರವಂಡ ತಿಮ್ಮಯ್ಯ ಹೇಳಿದರು.

ವೀರಾಜಪೇಟೆಯ ಮಗ್ಗುಲದಲ್ಲಿ ರುವ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ನಾಯಕತ್ವ ಮತ್ತು ಮಿಲಿಟರಿ ದಂತ ವೈದ್ಯಕೀಯ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು 17–18ರ ವಯೋಮಿತಿ ಯುವಕ, ಯುವತಿ ಯರಿಗೆ ಸೇನೆ ಸವಾಲಾಗುತ್ತದೆ. ಭಾರತದ ಸೇನೆ ಪ್ರಪಂಚದಲ್ಲಿ ಬಲಿಷ್ಠ ಸೇನೆಯಾಗಿ ರೂಪುಗೊಳ್ಳುತ್ತಿರುವ ದಲ್ಲದೆ ಸಮಾಜ ಮುಖಿಯಾಗಿ ಅನೇಕ ಕೆಲಸಗಳನ್ನು ಮಾಡುತ್ತಿದೆ. ಇಂದು ಭಾರತ ದೇಶ ಚೀನಾದಂತ ಬಲಿಷ್ಠÀ ದೇಶದ ಸವಾಲುಗಳನ್ನು ಮೆಟ್ಟಿ ನಿಂತು ಮುನ್ನಡೆಯುವಷ್ಟು ಶಕ್ತವಾಗಿದೆ. ನಮ್ಮ ದೇಶದ ನಾಯಕರು ಸೇನೆಗೆ ಹೆಚ್ಚಿನ ಒತ್ತು ನೀಡಿ ಕಾಲ ಕಾಲಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸುತ್ತಿರುವದ ರಿಂದ ಭದ್ರತೆಯಲ್ಲಿ ನಮ್ಮ ದೇಶ ಬಲಿಷ್ಠತೆಯನ್ನು ಕಾಣುವಂತಾಗಿದೆ. ವಿದ್ಯಾ ಸಂಸ್ಥೆಗಳಲ್ಲಿ ಜ್ಞಾನ ಸಂಪಾದನೆ ಎಂಬದು ಅಗತ್ಯವಾಗಿದೆ. ಸರದಾರ್ ವಲ್ಲಬಾಯಿ ಪಟೇಲ್‍ರಂತಹ ನಾಯಕರು ಇಂದಿನ ಯುವ ಜನತೆಗೆ ನಾಯಕತ್ವ ಬೆಳೆಸಿಕೊಳ್ಳಲು ಮಾದರಿ ಯಾಗಿದ್ದಾರೆ. ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಯಕನಾಗಬ ಹುದು. ಸೈನಿಕರ ನಿತ್ಯದ ಕರ್ತವ್ಯದಲ್ಲಿ ದಂತ ಆರೋಗ್ಯ ಕೂಡ ಒಂದಾಗಿರು ತ್ತದೆ. ಅವರಿಗೂ ಕಾಲ ಕಾಲಕ್ಕೆ ಆರೋಗ್ಯದ ಅಗತ್ಯ ಇರುತ್ತದೆ ಎಂದರು.

ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡೆಂಟ್ ವೈಸ್ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಮಾತನಾಡಿ, ಜಂಕ್‍ಫುಡ್, ತಂಬಾಕು ಸೇವನೆ, ಮಾದಕ ದ್ರವ್ಯಗಳಿಂದ ಸೈನಿಕರಾಗಲಿ, ವಿದ್ಯಾರ್ಥಿಗಳಾಗಲಿ, ಸಾರ್ವಜನಿಕರಾಗಲಿ ದೂರ ಉಳಿಯ ಬೇಕು. ಇದು ಎಲ್ಲರ ಜೀವಕ್ಕೂ ಮುಳು ವಾಗುವದರೊಂದಿಗೆ ಕ್ಯಾನ್ಸರ್‍ಗೂ ಕಾರಣವಾಗಲಿದೆ. ನಾಯಕತ್ವ ಗುಣ ಸೇನೆಗೆ ಮಾತ್ರ ಸೀಮಿತವಲ್ಲ. ಇದರಿಂದ ಎಲ್ಲರೂ ಸಂಘಟಿತರಾಗಿ ಸಮಾಜಕ್ಕೆ ಒಳಿತನ್ನು ಹಾಗೂ ಸಮಾಜದಲ್ಲಿನ ಸವಾಲುಗಳನ್ನು ಎದುರಿಸಬಹುದಾಗಿದೆ. ಹೆಣ್ಣು ಹಾಗೂ ಗಂಡು ಎಂಬ ಭೇದವಿಲ್ಲದೆ ನಾಯಕತ್ವದ ಗುಣಗಳನ್ನು ಬೆಳೆಸಿ ಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಸಾಮಾಜಿಕ ಮೌಲ್ಯ ಹಾಗೂ ಸಾಮಾಜಿಕ ಕಳಕಳಿ ನಾಯಕತ್ವದಲ್ಲಿ ಅಡಕವಾಗಿರುತ್ತದೆ. ಪರಸ್ಪರ ಮುಕ್ತ ಮನಸ್ಸಿನಿಂದ ವಿಶ್ವಾಸದ ಮೂಲಕ ಎಲ್ಲವನ್ನು ಎದುರಿಸಬೇಕು. ಅನೇಕ ಯುವತಿಯರು ಇಂದು ಭಾರತದ ಸೇನೆಗೆ ಸೇರಿ ಉತ್ತಮ ಸೇನಾನಿಗಳಾಗು ತ್ತಿರುವದು ನಮ್ಮ ದೇಶಕ್ಕೆ ಹಮ್ಮೆ ಎಂದು ಹೇಳಿದರು.

ಕಾಲೇಜಿನ ಡೀನ್ ಸುನಿಲ್ ಮುದ್ದಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೇವಲ್ ಅಕಾಡೆಮಿಯ ಎಜಿಮಾಲ ಹಾಗೂ ನಿವೃತ್ತ ಲೆ.ಜ ಡಾ ವಿಮಲ್ ಅರೋರಾ , ಕರ್ನಲ್ ಕಮಾಂಡೆಂಟ್ ಎಡಿ ಕಾಪ್ರ್ಸ್ ಮತ್ತು ಕ್ಲೋವ್, ಏರ್ ಕಮಾಂಡರ್ ಬಾಲಕೃಷ್ಣ ಜಯನ್ ಉಪಸ್ಥಿತರಿದ್ದರು

ಎನ್‍ಸಿಸಿ ವಿದ್ಯಾರ್ಥಿಗಳು, ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿ ಗಳು, ಕೊಡಗು ದಂತ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.