ಸೋಮವಾರಪೇಟೆ, ನ. 10: ಗ್ರಾಮೀಣ ಭಾಗದಲ್ಲಿ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮಕ್ಕಳ ಹಬ್ಬವನ್ನು ಆಚರಿಸಲಾಯಿತು.
ದೀಪಾವಳಿ ಹಬ್ಬ ಕಳೆದು ಹತ್ತು ದಿನಗಳ ನಂತರ ಆಚರಿಸುವ ಹಬ್ಬದಲ್ಲಿ ನೇಗಿಲು, ನೊಗ, ಗುದ್ದಲಿ, ಹಾರೆ ಸೇರಿದಂತೆ ಎಲ್ಲಾ ತರಹದ ಸಲಕರಣೆಗಳನ್ನು ತೊಳೆದು ಪೂಜೆ ಸಲ್ಲಿಸಲಾಯಿತು.
ಮುಂಗಾರು ಕಳೆದು ನವೆಂಬರ್‍ನಲ್ಲಿ ಭತ್ತದ ಕಟಾವು ಪ್ರಾರಂಭವಾಗಲಿದ್ದು, ರೈತರು ಹಬ್ಬವನ್ನು ಆಚರಿಸುವ ಮೂಲಕ ಕೃಷಿ ಚಟುವಟಿಕೆ ಪ್ರಾರಂಭಿಸಲಿದ್ದಾರೆ.