ಮಡಿಕೇರಿ, ನ. 10: ಪ್ರಸಕ್ತ ಸಾಲಿನ ಕೊಡಗು ಜಿಲ್ಲಾ ವ್ಯಾಪ್ತಿಯಿಂದ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳಡಿ ರೈತರಿಗೆ/ ರೈತ ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ ಕಾಳು ಮೆಣಸು ಗಿಡಗಳನ್ನು ಪೂರೈಸಬೇಕಾಗುತ್ತದೆ. ಅದರಂತೆ ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿನ ಕಾಳುಮೆಣಸು ಗಿಡಗಳನ್ನು ಉತ್ಪಾದಿಸುತ್ತಿರುವ ನರ್ಸರಿ ಮಾಲೀಕರು ತಮ್ಮಗಳ ನರ್ಸರಿಯಲ್ಲಿ ಕನಿಷ್ಟ 25 ಸಾವಿರ ಸಂಖ್ಯೆಗಳ ಗುಣಮಟ್ಟದ ಕಾಳುಮೆಣಸು ಗಿಡಗಳನ್ನು ಉತ್ಪಾದಿಸುವ/ ಉತ್ಪಾದಿಸಲು ಇಚ್ಚಿಸುವ ನರ್ಸರಿ ಮಾಲೀಕರು ಕಾಳುಮೆಣಸು ನರ್ಸರಿಗಳನ್ನು ಅಡಿಕೆ ಮತ್ತು ಸಂಬಾರು ಬೆಳೆ ನಿರ್ದೇಶನಾಲಯ ಕ್ಯಾಲಿಕಟ್ ಕೇರಳ ರಾಜ್ಯದವರಿಂದ ಮಾನ್ಯತೆ ಪಡೆಯಬೇಕಿದೆ.

ತಮ್ಮ ನರ್ಸರಿಗಳು ಉತ್ತಮ ಗುಣಮಟ್ಟದ ಕಾಳುಮೆಣಸು ಬಳ್ಳಿಗಳ ಉತ್ಪಾದನೆಯಲ್ಲಿ ಮಾನ್ಯತೆ ಹೊಂದಿದ್ದಲ್ಲಿ ಈ ಗಿಡಗಳನ್ನು ನೇರವಾಗಿ ನರ್ಸರಿಗಳಿಂದ ವಿವಿಧ ಇಲಾಖೆ ಯೋಜನೆಗಳಿಗೆ ಖರೀದಿಸಬೇಕಾಗಿದೆ. ಮಾನ್ಯತೆ ಬಗ್ಗೆ ವಿವರವಾದ ಮಾಹಿತಿಯನ್ನು ಸ್ಥಳೀಯ ನರ್ಸರಿ ಮಾಲೀಕರಿಗೆ ಮನವರಿಕೆ ಮಾಡುವ ಕುರಿತು ಮಡಿಕೇರಿ ತೋಟಗಾರಿಕೆ ಕಚೇರಿಯ ಕೇಂದ್ರ ಸ್ಥಾನದಲ್ಲಿ ಸಂಬಾರು ಮಂಡಳಿ ಕ್ಯಾಲಿಕಟ್ ಕೇರಳರವರಿಂದ ತರಬೇತಿ ನೀಡಲಾಗುವದು.

ಆಸಕ್ತ ಕಾಳುಮೆಣಸು ಗಿಡಗಳ ಉತ್ಪಾದನೆಯ ನರ್ಸರಿ ಮಾಲೀಕರು ತಮ್ಮ ಹೆಸರನ್ನು ಜಿಲ್ಲೆಯ ಆಯಾಯ ತಾಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು. ತರಬೇತಿ ನಡೆಯುವ ದಿನಾಂಕ ಮತ್ತು ಸಮಯವನ್ನು ದೂರವಾಣಿ ಮೂಲಕ ತಿಳಿಸಲಾಗುವದು. ಹೆಚ್ಚಿನ ಮಾಹಿತಿಗೆ ಹಿರಿಯ ತೋಟಗಾರಿಕೆ ನಿರ್ದೇಶಕರು, ಜಿ.ಪಂ. ಮಡಿಕೇರಿ ಸಂಖ್ಯೆ 08272-228432, ಹಿರಿಯ ತೋಟಗಾರಿಕೆ ನಿರ್ದೇಶಕರು ಜಿ.ಪಂ. ಸೋಮವಾರಪೇಟೆ, ಸಂಖ್ಯೆ 08276-281364, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿ.ಪಂ. ಪೊನ್ನಂಪೇಟೆ 08272-249637 ನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕ ಚಂದ್ರಶೇಖರ ತಿಳಿಸಿದ್ದಾರೆ.