ವೀರಾಜಪೇಟೆ, ನ. 9: ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಕೊಡಗಿನ ಹಿಂದೂ ಮಲಯಾಳಿ ಬಾಂಧವರಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕೊಡಗು ಹಿಂದೂ ಮಲಯಾಳಿ ಸಂಘ ಹಾಗೂ ಕೊಡಗು ಹಿಂದೂ ಮಲಯಾಳಿ ಮಹಿಳಾ ಸಂಘದ ನೃತ್ಯ ತಂಡದವರು ಪ್ರಥಮ ಸ್ಥಾನ ಪಡೆದು ಟ್ರೋಫಿ ಹಾಗೂ ನಗದು ಬಹುಮಾನವನ್ನು ಪಡೆದು ಕೊಂಡಿದ್ದಾರೆ.

ಮಡಿಕೇರಿಯ ಕ್ರಿಸ್ಟಲ್‍ಕೋರ್ಟ್ ನಲ್ಲಿ ನಡೆದ ಓಣಾಘೋಷಂ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ದಲ್ಲಿ ವೀರಾಜಪೇಟೆಯ ಕೊಡಗು ಹಿಂದೂ ಮಲಯಾಳಿ ಅಸೋಸಿ ಯೇಶನ್ ಅಧ್ಯಕ್ಷ ಕೆ.ಬಿ. ಹರ್ಷವರ್ಧನ್, ಖಜಾಂಚಿ ರಾಜನ್, ಸದಸ್ಯರುಗಳು, ಹಿಂದೂ ಮಲಯಾಳಿ ಮಹಿಳಾ ಸಂಘದ ಅಧ್ಯಕ್ಷೆ ಶೀಬಾ ಪೃಥ್ವಿನಾಥ್, ಪ್ರಧಾನ ಕಾರ್ಯದರ್ಶಿ ಪದ್ಮಾವತಿ, ಕಾರ್ಯದರ್ಶಿ ಪುಷ್ಪಲತಾ ಶಿವಪ್ಪ, ಖಜಾಂಚಿ ಸಿಂಧೂ, ಅವಿನಾಶ್ ಹಾಗೂ ಎಲ್ಲ ಸದಸ್ಯರುಗಳು ಹಾಜರಿದ್ದರು.