ಕೂಡಿಗೆ, ನ. 9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೂಟ್ಟ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಡೆಸಲು ಉದೇಶಿಸಿರುವ ಕಸ ವಿಲೇವಾರಿ ಘಟಕವನ್ನು ತೆರಯಬಾರದು ಎಂದು ಗ್ರಾಮಸ್ಥರು ವಿರೋಧಿಸಿದ್ದು, ಬ್ಯಾಡಗೂಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ಗ್ರಾಮದವರಿಗೆ ಪುನರ್ವಸತಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಿಸಿದರೆ ಇದರಿಂದ ರೋಗಗಳು ಹರಡುವದರಿಂದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಿಳಾ ಪ್ರಮುಖ ಅಚ್ಚಮ್ಮ, ಅನಿತಾ, ರಾಧ, ಸಣ್ಣಕ ಸೇರಿದಂತೆ ನೂರಾರು ಮಹಿಳೆಯರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.