ಶ್ರೀಮಂಗಲ, ನ. 9: ದಕ್ಷಿಣ ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮದ ಮಂದತವ್ವ ದೇವ ಭಂಡಾರದ ಆಡಳಿತ ಮಂಡಳಿಯವರು ಮತ್ತು ಗ್ರಾಮಸ್ಥರು ಸೇರಿ ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರ ನೀಡಲು ಸಂಗ್ರಹಿಸಿದ ರೂ. 50 ಸಾವಿರ ದೇಣಿಗೆಯನ್ನು ವಿತರಿಸಿದರು.

ಉತ್ತರ ಕೊಡಗಿನ ಮೂವತ್ತೊಕ್ಲು ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಮುಕ್ಕಾಟೀರ ಮುದ್ದಪ್ಪ, ಸೀತಮ್ಮ, ದೀಪಕ್, ಮಂಡೀರ ಗಂಗಮ್ಮ, ಪೂವಯ್ಯ, ರಾಮಪ್ಪ ಅವರಿಗೆ ದೇಣಿಗೆಯನ್ನು ಗ್ರಾಮಕ್ಕೆ ತೆರಳಿ ಸಮಾನಾಂತರವಾಗಿ ವಿತರಿಸಲಾಯಿತು.