ಮಡಿಕೇರಿ, ನ. 9: ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತ್ರಿಯ ಹಕ್ಕೋತ್ತಾಯವನ್ನು ಮುಂದಿಟ್ಟು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ವತಿಯಿಂದ 29ನೇ ವರ್ಷದ ಕೊಡವ ನ್ಯಾಷನಲ್ ಡೇ ಸಮಾವೇಶವನ್ನು ತಾ. 24ರಂದು ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗುವದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಮಾತ್ರ ತಮ್ಮ ಸಾಂಸ್ಕøತಿಕ ತಾಯಿ ಬೇರು ಹೊಂದಿರುವ, ಕೊಡಗಿಗೆ ಮಾತ್ರ ಸೀಮಿತವಾಗಿರುವ ಕೊಡವ ಬುಡಕಟ್ಟು ಕುಲದ ಭಾಷೆ ಸಂಸ್ಕøತಿ, ಪರಂಪರೆ ಜನಪದ, ಸಾಂಪ್ರದಾಯಿಕ ಆವಾಸ ಸ್ಥಾನ, ಆಲೋಚನೆ, ವಿಚಾರಧಾರೆ, ಭಾವನೆ ಮತ್ತು ಅಶೋತ್ತರಗಳು ವಿಶಿಷ್ಟ ಮತ್ತು ಅಪೂರ್ವವಾಗಿದೆ. ಆದರೆ ಇಂದು ನಮ್ಮ ಜನಸಂಖ್ಯೆ ಕ್ಷೀಣಿಸುವ ಮೂಲಕ ಇವೆಲ್ಲವೂ ದುರ್ಬಲ ವಾಗುತ್ತಿದೆ ಎಂದು ವಿಷಾದಿಸಿದರು.
ಸಂವಿಧಾನದ 6ನೇ ಶೆÉಡ್ಯೂಲ್ ಪ್ರಕಾರ ಮತ್ತು ವಿಶ್ವರಾಷ್ಟ್ರ ಸಂಸ್ಥೆಯ ಸ್ವಯಂ ನಿರ್ಣಯ ಹಕ್ಕು ರಕ್ಷಣೆಗೆ ಕೊಡಮಾಡಿರುವ ಮಾನವ ಹಕ್ಕು ಕಾಯ್ದೆ ಪ್ರಕಾರ ಕೊಡವರ ಭೂ-ರಾಜಕೀಯ ಸ್ವಯಂ ಶಾಸನದ ಜನ್ಮಭೂಮಿ ಕೊಡವ ಲ್ಯಾಂಡ್ ರಚನೆ ಮತ್ತು ಕೊಡವ ಬುಡಕಟ್ಟು ಕುಲದ ಸಮಸ್ತ ಏಳಿಗೆ, ವಿಕಾಸ ಮತ್ತು ಕಲ್ಯಾಣಕ್ಕಾಗಿ ಕೊಡವ ಬುಡಕಟ್ಟು ಕುಲವನ್ನು ರಾಜ್ಯಾಂಗದ 340 ಮತ್ತು 342ನೇ ವಿಧಿ ಪ್ರಕಾರ ಬುಡಕಟ್ಟು ಕುಲವೆಂದು ಎಸ್.ಟಿ ಪಟ್ಟಿಯಲ್ಲಿ ಮಾನ್ಯ ಮಾಡಬೇಕೆಂಬ ಹಕ್ಕೋತ್ತಾಯ ಮುಂದಿರಿಸುವದರೊಂದಿಗೆ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ವಿಶ್ವ ಸಂಸ್ಥೆಯ ಯುನೇಸ್ಕೋದ ಇಂಟಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂಬ ಪ್ರಧಾನ ಹಕ್ಕೋತ್ತಾಯಗಳನ್ನು ಕೊಡವ ನ್ಯಾಷನಲ್ ಡೇಯಲ್ಲಿ ಮಂಡಿಸಲಾಗುವದು ಎಂದರು.
ಟಿಪ್ಪುವಿನ ಸೇನೆಯೊಂದಿಗೆ ಸೇರಿ ದೇವಾಟ್ಪರಂಬುವಿನಲ್ಲಿ ಕೊಡವರ ಮಾರಣಹೋಮ ನಡೆಸಿದ ಕೃತ್ಯಕ್ಕಾಗಿ ಫೆಂಚ್ ಸರಕಾರ ಕೊಡವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುವ ಸಲುವಾಗಿ ದೆಹಲಿಯ ಫ್ರೆಂಚ್ ರಾಯಭಾರಿ ಕಚೇರಿ ಮುಂದೆ ಹಮ್ಮಿಕೊಳ್ಳಲಾದ ಸತ್ಯಾಗ್ರಹ ಯಶಸ್ವಿಯಾಗಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.
ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಮುಖ ಹಕ್ಕೋತ್ತಾಯವಾದ ‘ಅಟೋನೋಮಸ್ ಕೊಡವ ಲ್ಯಾಂಡ್’ ಮತ್ತು ಬುಡಕಟ್ಟು ಜನರಾದ ಕೊಡವರನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ‘ಎಸ್ಟಿ ಟ್ಯಾಗ್’ ನೀಡಬೇಕೆಂದು ಆಗ್ರಹಿಸಿರುವದು ಸಂಘಟನೆಯ ಹೋರಾಟ ಮತ್ತು ಕೊಡವ ಆಶೋತ್ತರದ ಬಹು ಮಹತ್ವದ ಮೈಲುಗಲ್ಲಾಗಿದೆ ಎಂದು ನಾಚಪ್ಪ ವಿಶ್ಲೇಷಿಸಿದರು.
ಸರಕಾರದ ವತಿಯಿಂದ ನಡೆಸಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಲು ಕಾರಣಕರ್ತರಾದ ಹಾಗೂ ಟಿಪ್ಪುವಿನ ವಿಷಯವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕುವ ಸಂಬಂಧ ಕ್ರಮ ಕೈಗೊಂಡಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ಅವರುಗಳು ಅಭಿನಂದನಾರ್ಹರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಚಂಬಂಡ ಜನತ್, ಅರೆಯಡ ಗಿರೀಶ್ ಹಾಗೂ ಪುದಿಯೊಕ್ಕÀಡ ಕಾಶಿ ಉಪಸ್ಥಿತರಿದ್ದರು.