ಸೋಮವಾರಪೇಟೆ, ನ.9: ಮೂಲತಃ ಮಡಿಕೇರಿ ನಿವಾಸಿ, ಮೈಸೂರಿನಲ್ಲಿ ನೆಲೆಸಿದ್ದ ನಿವೃತ್ತ ಗ್ರಂಥಪಾಲಕ ಹೆಚ್.ಆರ್. ಶಾಂತಕುಮಾರ್ (88) ಅವರು ತಾ. 6ರಂದು ನಿಧನರಾಗಿದ್ದು, ಅವರ ಮೃತದೇಹವನ್ನು ಚಾಮರಾಜನಗರ ಜೆಎಸ್‍ಎಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ.
ಕಳೆದ ಆಗಸ್ಟ್ 22 ರಂದು ಇವರ ಪತ್ನಿ ಹೆಚ್.ಎಸ್. ಮನೋರಮ ಅವರೂ ಸಹ ನಿಧನರಾಗಿದ್ದು, ಅವರ ಮೃತದೇಹವನ್ನೂ ಸಹ ಜೆಎಸ್‍ಎಸ್ ಆಸ್ಪತ್ರೆಗೆ ದಾನ ಮಾಡಲಾಗಿತ್ತು.