ಮಡಿಕೇರಿ, ನ. 9: ಮಡಿಕೇರಿಯ ಚೈನ್ ಗೇಟ್ ಬಳಿ ಹೆದ್ದಾರಿ ಬದಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಗಳು ನಿರ್ಮಿಸುತ್ತಿರುವ ರೆಸಾರ್ಟ್ ಒಂದರ ಕಾರ್ಮಿಕರು ರೆಸಾರ್ಟ್‍ನ ತ್ಯಾಜ್ಯ ಹರಿಸಲು ಪೈಪ್ ಅಳವಡಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಡಿಕೇರಿ ರಕ್ಷಣಾ ವೇದಿಕೆಯವರು ಕೆಲಸ ಸ್ಥಗಿತಗೊಳಿಸಿದ ಪ್ರಸಂಗ ನಡೆದಿದೆ.

ನಗರಸಭೆಯ ಯಾವದೇ ಅನುಮತಿ ಇಲ್ಲದೆ ಅಕ್ರಮವಾಗಿ ಹೆದ್ದಾರಿಯ ಬದಿಯಲ್ಲಿ ಚರಂಡಿ ತೋಡಿ ಮಡಿಕೇರಿ ಕೊಡವ ಸಮಾಜದ ಮಡಿಕೇರಿ, ನ. 9: ಮಡಿಕೇರಿಯ ಚೈನ್ ಗೇಟ್ ಬಳಿ ಹೆದ್ದಾರಿ ಬದಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಗಳು ನಿರ್ಮಿಸುತ್ತಿರುವ ರೆಸಾರ್ಟ್ ಒಂದರ ಕಾರ್ಮಿಕರು ರೆಸಾರ್ಟ್‍ನ ತ್ಯಾಜ್ಯ ಹರಿಸಲು ಪೈಪ್ ಅಳವಡಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಡಿಕೇರಿ ರಕ್ಷಣಾ ವೇದಿಕೆಯವರು ಕೆಲಸ ಸ್ಥಗಿತಗೊಳಿಸಿದ ಪ್ರಸಂಗ ನಡೆದಿದೆ.

ನಗರಸಭೆಯ ಯಾವದೇ ಅನುಮತಿ ಇಲ್ಲದೆ ಅಕ್ರಮವಾಗಿ ಹೆದ್ದಾರಿಯ ಬದಿಯಲ್ಲಿ ಚರಂಡಿ ತೋಡಿ ಮಡಿಕೇರಿ ಕೊಡವ ಸಮಾಜದ ಸಮಾಜಕ್ಕೆ ಮಾಹಿತಿ ನೀಡಿದ್ದಾರೆ. ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಸದಸ್ಯರೊಂದಿಗೆ ಧಾವಿಸಿ ಬಂದು ರೆಸಾರ್ಟ್‍ನ ಕೆಲಸಗಾರರನ್ನು ಕರೆಸಿ ಈ ಜಾಗವನ್ನು ಮೊದಲಿನಂತೆ ಸುಸ್ಥಿತಿಗೆ ತರದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಸದ್ಯಕ್ಕೆ ಕೆಲಸ ಸ್ಥಗಿತಗೊಳಿಸಲಾಗಿದೆ.