ಸೋಮವಾರಪೇಟೆ, ನ. 8: ಸೋಮವಾರಪೇಟೆ ತಾಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ರಚಿತ ಗೊಂಡಿರುವ ತಾಲೂಕು ಅಭಿವೃದ್ಧಿ ಸಮಿತಿ ಸಭೆ ತಾ.9ರಂದು (ಇಂದು) ನಡೆಯಲಿದೆ ಎಂದು ಸಮಿತಿ ಸಂಚಾಲಕ ಎಸ್.ಮಹೇಶ್ ತಿಳಿಸಿದ್ದಾರೆ. ಅಂದು ಸಂಜೆ 3.30 ಕ್ಕೆ ಸೋಮವಾರಪೇಟೆ ಕೊಡವ ಸಮಾಜದ ಮೇಲಿನ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು,ಸಂಘ ಸಂಸ್ಥೆಗಳ ಪ್ರಮುಖರು,ಎಲ್ಲಾ ಜನಾಂಗ, ಸಮಾಜಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ತಾಲೂಕು ಅಭಿವೃದ್ಧಿಗೆ ಸಂಬಂಧಿಸಿ ದಂತೆ ಸಲಹೆ ಸೂಚನೆ ನೀಡಬೇಕೆಂದು ಕೋರಿದ್ದಾರೆ.