ಮಡಿಕೇರಿ, ನ. 8: ಮಾದಾಪುರ ಸರಕಾರಿ ಆಸ್ಪತ್ರೆಯ ಸಮೀಪ ಕಳೆದ ಅನೇಕ ವರ್ಷಗಳಿಂದ ಮಾರ್ಗಬದಿ ಲಾರಿಯೊಂದು (ಕೆಎ 51-600) ಕೆಟ್ಟು ನಿಂತಿದೆ. ಮಾದಾಪುರದಿಂದ ಗರ್ವಾಲೆ ಕಡೆಗೆ ತೆರಳುವ ರಸ್ತೆ ತಿರುವಿನಲ್ಲಿ ಕೆಟ್ಟು ನಿಂತಿರುವ ಈ ಲಾರಿಯಿಂದಾಗಿ ಅಪಘಾತ ಎದುರಾಗುವ ಅಪಾಯವಿದೆ. ಇತ್ತ ಸಂಬಂಧಪಟ್ಟವರು ಗಮನಹರಿಸಬೇಕಿದೆ ಎಂದು ಅಲ್ಲಿನ ಸಾರ್ವಜನಿಕರು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.