ನಾಪೆÇೀಕ್ಲು, ನ. 7: ತಕ್ವಾ ಶೈಕ್ಷಣಿಕ ಹಾಗೂ ಸಂಶೋಧನಾ ಫೌಂಡೆಷನ್ ವತಿಯಿಂದ ಸಮೀಪದ ಚೆರಿಯಪರಂಬು, ಬಲಮುರಿ, ಕೊಟ್ಟಮುಡಿ ಹಾಗೂ ಮಡಿಕೇರಿಯ ಆಜಾದ್ ನಗರದ 21 ನೆರೆ ಸಂತ್ರಸ್ತ ಕುಟುಂಬಗಳಿಗೆ ಮನೆ ಕಟ್ಟಡ ಸಾಮಗ್ರಿಗಳನ್ನು ವಿತರಿಸಲಾಯಿತು.

ನಾಪೋಕ್ಲುವಿನ ಮದೀನ ಮಸೀದಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂತ್ರಸ್ತರಿಗೆ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್‍ರಶೀದ್, ಮಹಮದ್, ಸುಂಟಿಕೊಪ್ಪದ ಹಾಜಿ ಜೈನುಲ್ ಶಬದೀನ್, ವೀರಾಜಪೇಟೆಯ ಆಜಮ್ ಮಸೀದಿ ಅಧ್ಯಕ್ಷ ನಿಸಾರ್ ಅಹಮದ್, ಏಜಜ್ ಅಹಮದ್, ಕುಂಜಿಲದ ಹಸನ್ ಉಸ್ತಾದ್ ಪಾಲ್ಗೊಂಡಿದ್ದರು. ಈ ಸಂದರ್ಭ ಜಿಲ್ಲೆಯ 30 ಭಾಗಗಳಲ್ಲಿ ಉಚಿತವಾಗಿ ಕೊಳವೆ ಬಾವಿ ನಿರ್ಮಿಸಿಕೊಟ್ಟ ದಾರುಲ್ ಕೈರ್ ಸಂಸ್ಥೆಯ ವೀರಾಜಪೇಟೆಯ ಅಕ್ರಂ ಅವರನ್ನು ಸನ್ಮಾನಿಸಲಾಯಿತು.