ಸೋಮವಾರಪೇಟೆ, ನ. 7: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಆಶ್ರಯದಲ್ಲಿ ಸಮೀಪದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಂತೆ ರಚಿಸಲಾಗಿರುವ ‘ಶಾಂತ ಮಲ್ಲಿಕಾರ್ಜುನ ವಿಶೇಷ ಚೇತನರ ಸಂಘ’ವನ್ನು ಗ್ರಾ.ಪಂ. ಸಭಾಂಗಣದಲ್ಲಿ ಉದ್ಘಾಟಿಸ ಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮಯ್ಯ ಅವರು ನೂತನ ಸಂಘಕ್ಕೆ ಚಾಲನೆ ನೀಡಿ, ವಿಶೇಷ ಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗ ಬೇಕೆಂದು ಸಲಹೆ ನೀಡಿದರು.

ಈ ಸಂದರ್ಭ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ತಾಲೂಕು ಮೇಲ್ವಿಚಾರಕ ಎ. ಸುರೇಶ್, ಆರೋಗ್ಯ ಕಾರ್ಯಕರ್ತ ಎ.ಎಚ್. ಚಂದ್ರು, ಆಶಾ ಕಾರ್ಯಕರ್ತೆ ದಿವ್ಯ ಸೇರಿದಂತೆ ಸಂಘದ ಸದಸ್ಯರು ಪಾಲ್ಗೊಂಡಿದ್ದರು.