ಮಡಿಕೇರಿ, ನ. 7: 2019: ಎನ್‍ಆರ್ ಸಮೂಹವು, ಮರ್ಕೆರಾ ಡೌನ್ಸ್ ಗಾಲ್ಫ್ ಕ್ಲಬ್ ಸಹಯೋಗದೊಂದಿಗೆ ಎನ್‍ಆರ್ ಮುಕ್ತ ಗಾಲ್ಫ್ ಚಾಂಪಿಯನ್‍ಶಿಪ್-2019 ಅನ್ನು ಮಡಿಕೇರಿಯ ಮರ್ಕೆರಾ ಡೌನ್ಸ್ ಗಾಲ್ಫ್ ಕ್ಲಬ್‍ನಲ್ಲಿ ತಾ. 3 ರಂದು ಆಯೋಜಿಸಲಾಗಿತ್ತು.

ಮೈಸೂರು, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಊಟಿ ಮತ್ತು ಕೊಡೈಕೆನಾಲ್ ಸೇರಿದಂತೆ ವಿವಿಧ ಭಾಗಗಳ ಸುಮಾರು 75ಕ್ಕೂ ಹೆಚ್ಚು ಗಾಲ್ಫ್ ಆಟಗಾರರು ಭಾಗವಹಿಸಿದ್ದರು. 8 ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಮರ್ಕೆರಾ ಡೌನ್ಸ್ ಗಾಲ್ಫ್ ಕ್ಲಬ್‍ನ ನಾಯಕ ಐ.ಕೆ. ಅನಿಲ್ ಅವರಿಂದ ಪಂದ್ಯ ಆರಂಭವಾಯಿತು. ಸೈಕಲ್ ಪ್ಯೂರ್ ಅಗರಬತ್ತೀಸ್‍ನ ರಾಷ್ಟ್ರೀಯ ಮಾರಾಟ ವ್ಯವಸ್ಥಾಪಕ ದ್ವಾರಕಾನಾಥ್ ವಿಜೇತರಿಗೆ ಟ್ರೋಫಿ ವಿತರಿಸಿದರು. ಮರ್ಕೆರಾ ಡೌನ್ಸ್ ಗಾಲ್ಫ್ ಕ್ಲಬ್‍ನ ನಾಯಕ ಐ.ಕೆ. ಅನಿಲ್, ಕಾರ್ಯದರ್ಶಿ ಹರೀಶ್ ಅಪ್ಪಣ್ಣ, ಪಂದ್ಯಾವಳಿಯ ಸಂಚಾಲಕ ಕೆ.ಪಿ. ರಂಜಿತ್ ಉಪಸ್ಥಿತರಿದ್ದರು.

ಪ್ರತಿಷ್ಠಿತ ಚಾಂಪಿಯನ್‍ಶಿಪ್‍ನ ಪ್ರಸಕ್ತ ಸಾಲಿನ ಪಂದ್ಯಾವಳಿಯು 8 ವಿಭಾಗಗಳಲ್ಲಿ ನಡೆಯಿತು, ಪ್ರತಿ ವಿಭಾಗದ ವಿಜೇತರು ಈ ಕೆಳಗಿನಂತಿದ್ದಾರೆ:

ಓಪನ್ ಸ್ಟ್ರೋಕ್ ಪ್ಲೇ - ಎನ್.ಆರ್. ಸಮೂಹದಿಂದ ನೀಡಲಾದ ರೋಲಿಂಗ್ ಟ್ರೋಫಿ ವಿಜೇತ- ಅಮೋಘ್ ದೇವಯ್ಯ 75, ರನ್ನರ್ ಅಪ್- ರಂಜಿತ್ ಕೆ.ಪಿ. 76.

ನೆಟ್ ಸ್ಟ್ರೋಕ್ ಪ್ಲೇ (0-18)- ಎನ್.ಆರ್. ಸಮೂಹದಿಂದ ನೀಡಲಾದ ರೋಲಿಂಗ್ ಟ್ರೋಫಿ ವಿಜೇತ- ಫಯಾಜ್ ಮೋಸಾ ಕುಟ್ಟಿ 63 ನೆಟ್, ರನ್ನರ್ ಅಪ್- ರಾಹುಲ್ ಕುಟ್ಟಪ್ಪಾ 66 ನೆಟ್. ಹ್ಯಾಂಡಿಕ್ಯಾಪ್ ಸ್ಟೇಬಲ್‍ಫೆÇೀರ್ಡ್ 0-18 ವಿಜೇತ- ದಿನೇಶ ಕರಿಯಪ್ಪ 35 ಪಾಯಿಂಟ್‍ಗಳು (ಃಚಿಛಿಞ 9 -20), ರನ್ನರ್ ಅಪ್- ಅನಿಲ್ ಪಾಂಡೆ 35 (ಃಚಿಛಿಞ 9 -19)

ಹ್ಯಾಂಡಿಕ್ಯಾಪ್ ಸ್ಟೇಬಲ್‍ಫೆÇೀರ್ಡ್ 19-24 ವಿಜೇತ- ಕುಟ್ಟಪ್ಪ ಕೆ.ಪಿ. 34 ಪಾಯಿಂಟ್‍ಗಳು, ರನ್ನರ್ ಅಪ್- ನಾಗರಾಜ್ ಎಂ.ಪಿ. 32 ಪಾಯಿಂಟ್‍ಗಳು.

ಹಿರಿಯ ನಾಗರಿಕರ ಸ್ಟೇಬಲ್‍ಫೆÇೀರ್ಡ್ (60 ವರ್ಷ ಮೇಲ್ಪಟ್ಟ ವಯೋಮಾನದ ಅಂಗವಿಕಲರು) ವಿಜೇತ- ಅನಿಲ್ ಐ.ಕೆ. 35 ಪಾಯಿಂಟ್‍ಗಳು, ರನ್ನರ್ ಅಪ್- ಡಾ. ರಮೇಶ ಬೋಪಯ್ಯ 31 ಪಾಯಿಂಟ್‍ಗಳು.

ಸ್ಟೇಬಲ್‍ಫೆÇೀರ್ಡ್ ಡಬಲ್ಸ್ (ಖಿeಚಿm ಇveಟಿಣ ಊಚಿಟಿಜiಛಿಚಿಠಿ 0-24) ವಿಜೇತರು- ಫಯಾಜ್ ಮೋಸಾ ಕುಟ್ಟಿ &amdiv; ಅಯ್ಯಪ್ಪ ಎಂ.ಬಿ. 71 ಪಾಯಿಂಟ್‍ಗಳು, ರನ್ನರ್ ಅಪ್- ರಂಜಿತ್ ಕೆ.ಪಿ. &amdiv; ದೇವಯ್ಯ ಎನ್.ಸಿ 65 ಪಾಯಿಂಟ್‍ಗಳು.

ಪಿನ್‍ಗೆ ಹತ್ತಿರ ಆದಿತ್ಯ ಸೋಮಯ್ಯ 19.8 ತಾ. 3 ರಂದು ನಡೆದ ಈ ಚಾಂಪಿಯನ್‍ಶಿಪ್ ಅನ್ನು ಮಡಿಕೇರಿಯ ಮರ್ಕೆರಾ ಡೌನ್ಸ್ ಗಾಲ್ಫ್ ಕ್ಲಬ್‍ನಲ್ಲಿ ಆಯೋಜಿಸಲಾಗಿತ್ತು. ಮುಕ್ತ ಆಹ್ವಾನ ಪಂದ್ಯಾವಳಿಯಲ್ಲಿ ಮೈಸೂರು, ಬೆಂಗಳೂರು, ಕೂರ್ಗ್, ಚಿಕ್ಕಮಗಳೂರು, ಊಟಿ ಮತ್ತು ಕೊಡೈಕೆನಾಲ್ ಗಾಲ್ಫ್ ಆಟಗಾರರು ಪ್ರಶಸ್ತಿಗಾಗಿ ಸ್ಪರ್ಧಿಸಿದರು.