ಶನಿವಾರಸಂತೆ, ನ. 7: ಸಮೀಪದ ಬೆಸೂರು - ನಿಲುವಾಗಿಲು ಗ್ರಾಮದ ಶ್ರೀಬಾಲ ತ್ರಿಪುರಸುಂದರಿ ಅಮ್ಮನವರ ದೇವಾಲಯದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ದೇವಾಲಯ ಸಮಿತಿ ಸಹಭಾಗಿತ್ವದಲ್ಲಿ ನಡೆದ ‘ಶರಣ ಸಂಗಮ-ಸಂಸ್ಕøತಿ ದರ್ಶನ’ 2ನೇ ವಿಚಾರಗೋಷ್ಠಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜೀವನ ಸಾರ್ಥಕತೆಗೆ ಶಿವಶರಣರ ಬದುಕಿನ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ವಚನಗಳ ಸಾರವನ್ನು ಅರಿತುಕೊಳ್ಳಬೇಕೆಂದರು. ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರಾಧ್ಯಾಪಕ ಸಿ.ಎಂ. ಧರ್ಮಪ್ಪ ಶರಣರ ಬದುಕು ಇಂದಿನ ಯುವಜನಾಂಗಕ್ಕೆ ಆದರ್ಶವಾಗಬೇಕು ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ ಅಧ್ಯಾಪಕ ಕೆ.ಪಿ. ಜಯಕುಮಾರ್ ‘ಸದೃಢ ಹಾಗೂ ಸಮಾನತೆಯ ರಾಷ್ಟ್ರ ನಿರ್ಮಾಣದಲ್ಲಿ ವಚನ ಸಾಹಿತ್ಯ’ ಎಂಬ ವಿಚಾರ ಮಂಡಿಸುತ್ತಾ ಇಡೀ ವಿಶ್ವ ಮನೆಯಾದರೇ ಭಾರತ ಅದರಲ್ಲಿ ದೇವರ ಮನೆಯಂತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ. ಸೋಮಪ್ಪ ಮಾತನಾಡಿ, ಜೀವನದಲ್ಲಿ ಬದಲಾವಣೆಗೆ ಶರಣರ ವಚನಗಳ ಅನುಷ್ಠಾನ ಮಾಡಿಕೊಂಡು ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು. ದೇವಾಲಯ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಬಿ. ಹರೀಶ್, ಕಾರ್ಯದರ್ಶಿ ರೇಣುಕಾ, ಪ್ರಮುಖ ರಾದ ಶಿವಕುಮಾರ್, ಚೆರಿಯಮನೆ ಸುರೇಶ್, ಎಸ್.ಜಿ. ನರೇಶ್ಚಂದ್ರ, ಸಿ. ಪ್ರಕಾಶ್ಚಂದ್ರ, ಒಡೆಯನಪುರ ಸುರೇಶ್, ಮಮತಾ, ಸತೀಶ್, ಹೆಚ್.ಎಸ್. ಪ್ರೇಮನಾಥ್ ಮದನ್, ಜಯರಾಜ್, ಉಪನ್ಯಾಸಕ ಎನ್.ಎಂ. ಚಂದ್ರಶೇಖರ್, ಸಾಂಬಶಿವಮೂರ್ತಿ, ಶಿವಪ್ಪ ಉಪಸ್ಥಿತರಿದ್ದರು.