ಮಡಿಕೇರಿ, ನ. ೬: ವರ್ಷದ ಹಿಂದೆ ಅಪ್ರಾಪ್ತೆ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ; ಆಕೆಯ ಹೆತ್ತವರ ಅರಿವಿಗೂ ಬಾರದಂತೆ ತಮಿಳುನಾಡಿನ ಸೇಲಂನಲ್ಲಿ ರಹಸ್ಯವಾಗಿ ಇರಿಸಿಕೊಂಡಿದ್ದ ಸುಂಟಿಕೊಪ್ಪದ ಆಟೋ ಚಾಲಕನೊಬ್ಬನನ್ನು ಕೊಡಗು ಸಿಇಎನ್ ಘಟಕ ಪೊಲೀಸರು ಪತ್ತೆ ಹಚ್ಚಿ ಆರೋಪಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಷದ ಹಿಂದೆ ವಿದ್ಯಾರ್ಥಿನಿಯ ಅಪಹರಣ ಸಂಬAಧ ಸುಂಟಿಕೊಪ್ಪ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿ ದ್ದರೂ ಈ ತನಕ ಪ್ರಕರಣ ಬೇಧಿಸಲು ಸಾಧ್ಯವಾಗಿರಲಿಲ್ಲ; ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು; ಸಿಇಎನ್ ಠಾಣೆಗೆ ನಿರ್ದೇಶಿಸಿ ತನಿಖೆಗೆ ಸೂಚಿಸಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನ ದಂತೆ ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ಕುಮಾರ್, ಸಬ್ಇನ್ಸ್ಪೆಕ್ಟರ್ ಎಂ.ಡಿ. ಅಪ್ಪಾಜಿ ಮಾರ್ಗದರ್ಶನದಲ್ಲಿ ಎಎಸ್ಐ ಆನಂದ್, ಸಿಬ್ಬಂದಿಗಳಾದ ಪ್ರಕಾಶ್, ಸಾಲ್ಡಾನ ಇವರುಗಳು ಸೇಲಂನಲ್ಲಿ ಆಟೋ ಚಾಲಕ ಜಸ್ಟಿನ್ ಎಂಬಾತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಸಂತ್ರಸ್ತ ಬಾಲಕಿಯನ್ನು ಪೋಷಕರ ವಶಕ್ಕೆ ಒಪ್ಪಿಸಿರುವ ಸಿಇಎನ್ ಪೊಲೀಸ್ ತಂಡ, ಆರೋಪಿ ವಿರುದ್ಧ ‘ಪೋಕ್ಸೋ’ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡು; ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.