ವೀರಾಜಪೇಟೆ, ನ. ೬: ಹಲವು ತಿಂಗಳುಗಳಿAದ ಉದರ ಸಮಸ್ಯೆ ಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಸುಂಕದ ಕಟ್ಟೆ ನಿವಾಸಿ ಸುಬ್ರಮಣಿ (೪೪) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸುಬ್ರಮಣಿಯವರಿಗೆ ಎರಡು ಹೆಣ್ಣು ಒಂದು ಗಂಡು ಮಕ್ಕಳಿದ್ದು, ಮಗ ಆಟೋ ಚಾಲಕ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದಾನೆ. ಮೃತ ವ್ಯಕ್ತಿ ಹಲವು ತಿಂಗಳುಗಳಿAದ ಉದರ ಬೇನೆಯಿಂದ ಬಳಲುತಿದ್ದರು ಎನ್ನಲಾಗಿದ್ದು, ಮನೆ ಯಲ್ಲಿ ಎಲ್ಲರೂ ಇದ್ದ ಸಂದರ್ಭವೇ ಕೊಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸರ್ಕಾರಿ ಅಸ್ಪತ್ರೆಯ ವೈದ್ಯರು ಇಂದು ಬೆಳಿಗ್ಗೆ ಶವ ಪರೀಕ್ಷೆ ಮಾಡಿದ್ದು, ಮೃತ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.