ಮಡಿಕೇರಿ, ನ. ೬: ಡಾ. ಅಖಿಲ್ ಕುಟ್ಟಪ್ಪ ಹಾಗೂ ಅಶ್ವಥ್ ಅಯ್ಯಪ್ಪ ಸ್ಮರಣಾರ್ಥವಾಗಿ ಕಳೆದ ಹಲವು ವರ್ಷಗಳಿಂದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಲ್ಪಡುತ್ತಿರುವ ಅಂತರ್ ಪ್ರೌಢಶಾಲಾ ಕ್ರಿಕೆಟ್ ಪಂದ್ಯಾವಳಿಯೊAದಿಗೆ ಈ ಬಾರಿ ಅಂತರ್ ಪದವಿಪೂರ್ವ ಶಾಲಾ - ಕಾಲೇಜು ತಂಡಗಳನ್ನು ಸೇರ್ಪಡೆಗೊಳಿಸಲಾಗಿದೆ. ೬ನೇ ವರ್ಷದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ತಾ. ೨೫ ರಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜರುಗಲಿದೆ.
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ರಾಜ್ಯ ಕ್ರಿಕೆಟ್ ಸಂಸ್ಥೆ (ಮಂಗಳೂರು ವಲಯ)ಯ ಆಶ್ರಯದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು, ಅಂತರ ಪ್ರೌಢಶಾಲಾ ಹಾಗೂ ಅಂತರ ಪ.ಪೂ. ಕಾಲೇಜು ತಂಡಗಳು ಕೂಡಲೇ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಪAದ್ಯಾಟದಲ್ಲಿ ಫೈನಲ್ ಪ್ರವೇಶಿಸಿದ ಎರಡು ತಂಡಗಳು ಮಂಗಳೂರಿನಲ್ಲಿ ಜರುಗುವ ಅಂತರ ಜಿಲ್ಲಾ (ಕೆಎಸ್ಸಿಎ) ಪಂದ್ಯಾವಳಿಗೆ ನೇರ ಪ್ರವೇಶ ಪಡೆಯಬಹುದಾಗಿದೆ ಎಂದು ವಾಂಡರ್ಸ್ ಕ್ರಿಕೆಟ್ ಕ್ಲಬ್ನ ಕಾರ್ಯದರ್ಶಿ ರಘುಮಾದಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೯೯೮೦೦೬೦೩೨೨, ೯೯೪೫೨೭೩೬೮೮ ಅಥವಾ ೯೮೪೫೫೦೫೨೦೦ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.