ಚೆಟ್ಟಳ್ಳಿ, ನ. 6: ಅಮೇರಿಕನ್ ನೆಟ್‍ವರ್ಕ್ ಆಫ್ ಮಲಯಾಳಿ ಮುಸ್ಲಿಂ ಅಸೋಸಿಯೇಷನ್ (“ನನ್ಮ” ಹಾಗೂ ಅನ್ವಾರುಲ್ ಹುದಾ ಸಹಯೋಗದಲ್ಲಿ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ತುತ್ತಾದ ನಿರಾಶ್ರಿತರಿಗೆ ಸಹಾಯ ನೀಡಲಾಯಿತು. ಸಂಸ್ಥೆಯ ಮುದರ್ರಿಸ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ಪ್ರಾರ್ಥನೆಯೊಂದಿಗೆ ಸಂಸ್ಥೆಯ ಸಾರಥಿಗಳಾದ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಬಷೀರ್ ಸಅದಿ ದೇವಣಗೇರಿ ಉದ್ಘಾಟಿಸಿದರು. ವಿವಿಧ ಕಡೆಗಳಿಂದ ಆಗಮಿಸಿದ್ದ ಫಲಾನುಭವಿಗಳಿಗೆ “ನನ್ಮ” ಮತ್ತು ಅನ್ವಾರುಲ್ ಹುದಾ ಸಹಯೋಗದಲ್ಲಿರುವ ಸಹಾಯದ ಕೂಪನನ್ನು ಗ್ರಾಮ ಪಂಚಾಯಿತಿ ಸದಸ್ಯ ಲಿಯಾಕತ್ ಅಲಿ ನೇತೃತ್ವದಲ್ಲಿ ವಿತರಿಸಲಾಯಿತು. ಝುಬೈರ್ ಮುಸ್ಲಿಯಾರ್ ಬೆಂಗಳೂರು, ಖಾಲಿದ್ ಫೈಝಿ ಅಂಬಟ್ಟಿ, ಅಬೂಬಕ್ಕರ್ ಹಾಜಿ, ಶಫೀಕ್ ಸಖಾಫಿ, ಶಕೀರ್ ಮಾಸ್ಟರ್, ಜಲೀಲ್ ಅಮೀನಿ, ಜಿಲ್ಲಾ ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ, ಸ್ವಾದಿಖ್ ಬೆಂಗಳೂರು ಉಪಸ್ಥಿತರಿದ್ದರು. ಯಾಕೂಬ್ ಮಾಸ್ಟರ್ ಸ್ವಾಗತಿಸಿ ಮುಸ್ತಫಾ ನೆಲ್ಯಹುದಿಕೇರಿ ವಂದಿಸಿದರು.