ನಾಪೋಕ್ಲು, ನ. 6: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮಕ್ಕೆ ಕಂದಾಯ ಇಲಾಖೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ಭೇಟಿ ನೀಡಿದರು. ಬಲ್ಲಮಾವಟಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಪೇರೂರು ಬೆಟ್ಟಸಾಲಿನಲ್ಲಿ ಭೂಮಿಯ ಒಳಗೆ ನೀರು ಉಕ್ಕಿ ಹರಿಯುತ್ತಿದೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರನ್ನು ಭೇಟಿಯಾದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.ಈ ಸಂದರ್ಭ ಯಾವದೇ ದಾಖಲೆಗಳು ದೊರೆತಿಲ್ಲ ಎಂದು ಕಂದಾಯ ಪರಿವೀಕ್ಷಕ ರಾಮಯ್ಯ ತಿಳಿಸಿದ್ದು ತಮಗೆ ಸಿಕ್ಕಿದ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದರು. ಈ ಸಂದರ್ಭ ಗಣಿ ಭೂ ವಿಜ್ಞಾನ ಜಿಲ್ಲಾಧಿಕಾರಿ ರೇಷ್ಮಾ ಗ್ರಾಮಲೆಕ್ಕಿಗರಾದ ದಾನೇಶ್ವರಿ, ಜನಾರ್ಧನ, ಪಿಡಿಒ ಶ್ರೀಧರ್, ಅರಣ್ಯ ಇಲಾಖಾ ಸಿಬ್ಬಂದಿಗಳು ಇದ್ದರು.

- ದುಗ್ಗಳ, ಪ್ರಭಾಕರ್ ಪಿ.ಎನ್.