ಮಡಿಕೇರಿ, ನ. 6: ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಕೂಡಿಗೆ ಡಯಟ್‍ನ ಪ್ರಾಂಶುಪಾಲ ಜವರೇಗೌಡ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲು ಬೀಳಗಿ, ಬಿ.ಆರ್.ಸಿ.ಗಳಾದ ವನಜಾಕ್ಷಿ, ಬಿ.ಆರ್.ಸಿ. ಉತ್ತಪ್ಪ ನೋಡಲ್ ಅಧಿಕಾರಿಗಳಾದ ಅಯ್ಯಪ್ಪ, ರಂಗಸ್ವಾಮಿ, ಸಂಸ್ಥೆಯ ಅಧ್ಯಕ್ಷ ಕೋಳೆರ ಝರುಗಣಪತಿ, ತೀರ್ಪುಗಾರರಾದ ಕಾವೇರಿ ಶಾಲೆ ಅಧ್ಯಕ್ಷ ಸುದೀಶ್, ಕಾವೇರಿ ಕಾಲೇಜಿನ ರಾಸಾಯನಶಾಸ್ತ್ರದ ಉಪನ್ಯಾಸ ಚೇತನ್, ಶಾಲೆಯ ಬಿಇಡಿ ವಿಭಾಗದ ಪ್ರಾಂಶುಪಾಲ ನಾರಾಯಣ್, ಕಾಲೇಜು ಪ್ರಾಂಶುಪಾಲೆ ದಶಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಮಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾ ಯಿನಿ ವೀಣಾ ಕಾವೇರಮ್ಮ, ಪ್ರೊಜೆಕ್ಟ್ ಮೇನೇಜರ್ ರಮ್ಯ, ತಾಲೂಕಿನ 15 ಶಾಲೆಗಳಿಂದ ಶಿಕ್ಷಕರು ಮತ್ತು ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಸಾಯಿಶಂಕರ ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸಮಾರೋಪ ಸಮಾರಂಭ ಏರ್ಪಡಿಸಿ ಅತ್ಯುತ್ತಮ ವಸ್ತು ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಲಾಯಿತು. ರೇವತಿ ನಿರೂಪಿಸಿ ದರೆ, ನೀತಿ ಜಗದೀಶ್ ಸ್ವಾಗತಿಸಿದರು. ಸೌಮ್ಯ ವಂದನಾರ್ಪಣೆ ಮಾಡಿದರು.