ನಾಳೆ ವಿದ್ಯಾರ್ಥಿಗಳಿಗೆ ಸ್ಪರ್ಧೆ

ಗೋಣಿಕೊಪ್ಪ ವರದಿ, ನ. ೫: ಇಲ್ಲಿನ ಸೆಂಟ್ ಥೋಮಸ್ ಶಾಲೆಯ ಸುವರ್ಣ ಮಹೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧಾ ಕಾರ್ಯಕ್ರಮವನ್ನು ತಾ. ೭ ರಂದು ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ ೯.೩೦ ರಿಂದ ಸ್ಫರ್ಧೆ ಆರಂಭಗೊಳ್ಳಲಿದ್ದು, ಗೋಣಿಕೊಪ್ಪ ಸುತ್ತಮುತ್ತಲ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ವಿಜ್ಞಾನ ಪ್ರಯೋಗಗಳ ಸ್ಪರ್ಧೆ, ಚಿತ್ರಗಾರಿಕೆ ನಡೆಯಲಿದೆ.

೧ ರಿಂದ ೪ ನೆ ತರಗತಿ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ೫-೭ ತರಗತಿಗೆ ಜಾನಪದ ನೃತ್ಯ, ೮-೧೦ ತರಗತಿ ವಿದ್ಯಾರ್ಥಿಗಳಿಗೆ ಸಿನೆಮಾ ಹಾಡುಗಳಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೦೮೨೭೪ ೨೪೮೯೬೨ ಸಂಖ್ಯೆಗೆ ಸಂಪರ್ಕಿಸಲು ಶಾಲೆ ಮುಖ್ಯ ಶಿಕ್ಷಕ ಪಿ.ಕೆ. ಜಾರ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.