ಮಡಿಕೇರಿ, ನ. ೫: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಕೊಡಗಿನವರಾದ ಗುಂಡೂರಾವ್ ಅವರ ಕಾಲದಿಂದಲೂ ಕುಶಾಲನಗರವನ್ನು ತಾಲೂಕು ಮಾಡಬೇಕಾಗಿ ಕೂಗು ಕೇಳಿಬಂದಿತ್ತು.
ನAತರ ಕಳೆದ ಎರಡು ದಶಕಗಳಿಂದ ಕುಶಾಲನಗರವನ್ನು ಕೇಂದ್ರವಾಗಿರಿಸಿ ತಾಲೂಕು ರಚನೆ ಮಾಡಬೇಕೆಂದು ಈ ವ್ಯಾಪ್ತಿಗೆ ಒಳಪಡುವ ಜನತೆ ನಿರಂತರ ಹೋರಾಟ ಮಾಡುತ್ತಲೇ ಬರುತ್ತಿತ್ತು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಕುಶಾಲನಗರವನ್ನು ಕೇಂದ್ರವಾಗಿರಿಸಿ ಕಾವೇರಿ ತಾಲೂಕನ್ನು ಹೊಸದಾಗಿ ಘೋಷಣೆ ಮಾಡಿದರು..
ಇದೀಗ ಉಪವಿಭಾಗಾಧಿಕಾರಿ ಹಾಗೂ ಶಾಸಕರ ನೇತೃತ್ವದಲ್ಲಿ ಕಾವೇರಿ ತಾಲೂಕು ಹೋರಾಟ ಸಮಿತಿ, ಹಾಗೂ ಜನಪ್ರತಿನಿಧಿಗಳ ಸಭೆ ನಡೆದು , ನಾಲ್ಕು ಹೋಬಳಿಗಳನ್ನೊಳಗೊಂಡು ಕಾವೇರಿ ತಾಲೂಕು ರಚನೆಗೆ ಸರ್ಕಾರಕ್ಕೆ ಈ ವಾರದಲ್ಲೇ ಸಲ್ಲಿಸಲಾಗುವದೆಂದು ಎಸಿ ಜವರೇಗೌಡ ಮಾಹಿತಿ ನೀಡಿದರು. ಕುಶಾಲನಗರ ವ್ಯಾಪ್ತಿಯ ಜನರ ಕನಸು ಸದ್ಯದಲ್ಲೇ ನನಸಾಗಲಿದೆ.
ಆದರೆ ಪ್ರಸ್ತುತ ಸೋಮವಾರಪೇಟೆ ತಾಲೂಕಿಗೆ ಒಳಪಡುವ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಕೂಡ ಕಾವೇರಿ ತಾಲೂಕಿಗೆ ಸೇರ್ಪಡೆಗೊಳ್ಳಲಿದೆ.
ಇದರಿಂದ ಚೆಟ್ಟಳ್ಳಿಯ ಜನತೆಗೆ ತಮ್ಮ ಸರ್ಕಾರಿ ಕೆಲಸಗಳು ಯಾವದೇ ಅಡಚಣೆಯಿಲ್ಲದೆ, ಹಾಗೂ ಸಾರಿಗೆ ವ್ಯವಸ್ಥೆ ತೊಂದರೆಯಿಲ್ಲ ಸುಲಭವಾಗಿ ಕುಶಾಲನಗರಕ್ಕೆ ಹೋಗಿ ಬರಬಹುದಾಗಿದೆ.
ಆದರೆ ಚೆಟ್ಟಳ್ಳಿ ಗ್ರಾಮ ಪಂಚಾಯತಿಗೆ ಒಳಪಡುವ ಗ್ರಾಮಗಳನ್ನು ನೂತನವಾಗಿ ರಚಿಸಿರುವ ಕಾವೇರಿ ತಾಲೂಕಿಗೆ ಸೇರ್ಪಡೆ ಮಾಡದೆ, ಮಡಿಕೇರಿ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಪಂಚಾಯತ್ ಸದಸ್ಯರಾದ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಚೆಟ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಚೆಟ್ಟಳ್ಳಿ ಗ್ರಾಮವನ್ನು ಮಡಿಕೇರಿ ತಾಲೂಕಿಗೆ ಸೇರ್ಪಡೆಗೊಳಿಸುವ ಕುರಿತು ಸೋಮವಾರಪೇಟೆ ತಾಲೂಕು ಕಾರ್ಯನಿರ್ವಾಣಾಧಿಕಾರಿ ಅವರಿಂದ ಬಂದ ನೋಟಿಸ್ ಬಗ್ಗೆ ಚರ್ಚೆ ನಡೆದಿತ್ತು.
ಸಭೆಯಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಕೆಲವರು ಚೆಟ್ಟಳ್ಳಿಯಿಂದ ಮಡಿಕೇರಿಗೆ ಕೇವಲ ೧೦ ಕಿ.ಮೀ ದೂರದಲ್ಲಿದೆ ಚೆಟ್ಟಳ್ಳಿಯನ್ನು ಮಡಿಕೇರಿ ತಾಲೂಕಿಗೆ ಸೇರ್ಪಡೆಗೊಳಿಸಿದರೆ ಇಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇನ್ನು ಕೆಲವರು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯನ್ನು ನೂತನವಾಗಿ ರಚನೆಗೊಂಡಿರುವ ಕಾವೇರಿ ತಾಲೂಕಿಗೆ ಸೇರ್ಪಡೆಗೊಳಿಸಿದರೆ ಜನರಿಗೆ ಅನುಕೂಲವಾಗಲಿದೆ, ಅಲ್ಲದೆ ಮಡಿಕೇರಿಯು ಜಿಲ್ಲಾ ಕೇಂದ್ರವಾಗಿದ್ದು ಕೆಲಸದ ಒತ್ತಡಗಳು ಇರುವದರಿಂದ ಜನರಿಗೆ ತಮ್ಮ ಕೆಲಸ ಸಮಯಕ್ಕೆ ಸರಿಯಾಗಿ ನಡೆಯುವದು ಅನುಮಾನವಾಗಿದೆ.
ಈಗ ಚೆಟ್ಟಳ್ಳಿ ಗ್ರಾಮ ಪಂಚಾಯತಿ ವಾಪ್ತಿಗೆ ಒಳಪಡುವ ಕೂಡ್ಲೂರು ಚೆಟ್ಟಳ್ಳಿ ಕುಶಾಲನಗರ ಹೋಬಳಿಗೆ ಸೇರ್ಪಡೆಗೊಂಡಿದೆ. ಚೆಟ್ಟಳ್ಳಿ ಗ್ರಾಮವನ್ನು ಕಾವೇರಿ ತಾಲೂಕಿಗೆ ಸೇರ್ಪಡೆಗೊಳಿಸುವದು ಸೂಕ್ತ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಜನತೆಯಲ್ಲಿ ಗೊಂದಲ
ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಈರಳೆÀವಳಮುಡಿ, ಚೇರಳ ಶ್ರೀಮಂಗಲ (ಚೆಟ್ಟಳ್ಳಿ), ಕಾಫಿಬೋರ್ಡ್, ಪೊನ್ನತ್ಮೊಟೆ, ಕಂಡಕರೆ, ಹಾಗೂ ಕೂಡ್ಲೂರು ಚೆಟ್ಟಳ್ಳಿ ಸೇರಿ ಒಟ್ಟು ಆರು ವಾರ್ಡ್ಗಳು ಒಳಪಡುತ್ತದೆ.
ಇದೀಗ ಚೆಟ್ಟಳ್ಳಿ ಜನತೆಯಲ್ಲಿ ನೂತನವಾಗಿ ರಚನೆ ಮಾಡಿರುವ ಕಾವೇರಿ ತಾಲೂಕಿಗೆ ಸೇರ್ಪಡೆಗೊಳ್ಳದೆ. ಸೋಮವಾರಪೇಟೆ ತಾಲೂಕಿನಲ್ಲಿಯೇ ಉಳಿಯುತ್ತದೆ ಎಂಬ ಆತಂಕ ಶುರುವಾಗಿದೆ. ಇದರ ಬಗ್ಗೆ ಕಾವೇರಿ ತಾಲೂಕು ಹೋರಾಟ ಸಮಿತಿ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಜನತೆಯ ಆತಂಕ ದೂರ ಮಾಡಬೇಕಾಗಿದೆ. ವರದಿ: ಕೆ.ಎಂ. ಇಸ್ಮಾಯಿಲ್ ಕಂಡಕರೆ